ದುರ್ಗಾಂಭಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಎಸಿ- ಆಯುಕ್ತರು; ಸಿದ್ದತೆ ಪರಿಶೀಲನೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಮಾ.೧; ನಗರದೇವತೆ ದುರ್ಗಾಂಭಿಕಾ ದೇವಿಯ ಜಾತ್ರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ‌ದೇವಿಯ ದರ್ಶನಕ್ಕಾಗಿ ಭಕ್ತರು ಆಗಮಿಸುತ್ತಿದ್ದಾರೆ‌.ಇಂದು ಶುಕ್ರವಾರವಾದ್ದರಿಂದ ದುರ್ಗಾಂಭಿಕಾ ದೇವಿಯ‌ ದರ್ಶನ  ಮಾಡಲು ಭಕ್ತರ ದಂಡೇ ನೆರದಿತ್ತು.ಮಾ.೧೯ ರಿಂದ ನಗರದೇವತೆಯ ಜಾತ್ರಾ ಮಹೋತ್ಸವ ಪ್ರಾರಂಭಗೊಳ್ಳಲಿದೆ ಈ‌ ಹಿನ್ನೆಲೆಯಲ್ಲಿ ಈಗಾಗಲೇ ಸಕಲ‌ಸಿದ್ದತೆಗಳು ನಡೆದಿವೆ.ಇಂದು ಬೆಳಗ್ಗೆ  ಉಪವಿಭಾಗಾಧಿಕಾರಿ‌ ದುರ್ಗಾಶ್ರೀ,ಪಾಲಿಕೆ ಆಯುಕ್ತರಾದ ರೇಣುಕಾ ಸೇರಿದಂತೆ ಅಧಿಕಾರಿಗಳು ಭೇಟಿ‌ನೀಡಿ‌ ಸಿದ್ದತೆಗಳನ್ನು ಪರಿಶೀಲಿಸಿದರು.ದೇವಸ್ಥಾನದ ಮುಂಭಾಗದಲ್ಲಿ ಸಾಗರ ಜಿಲ್ಲೆಯ‌ ಕಲಾವಿದರಿಂದ‌ ಸುಮಾರು‌ ೧೫ ಲಕ್ಷರೂ ವೆಚ್ಚದಲ್ಲಿ ಆಕರ್ಷಕ ಮಹಾಮಂಟಪ ನಿರ್ಮಾಣ ಮಾಡಲಾಗಿದೆ.ಅಲ್ಲದೇ ದೇವಸ್ಥಾನದ ಸುತ್ತಮುತ್ತ ಶಾಮೀಯಾನ,ಕುಡಿಯುವ ನೀರಿನ‌ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ದತೆ ಮಾಡಲಾಗಿದೆ.ಭಕ್ತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.