ಬಿಜೆಪಿ‌ ಲೋಕಸಭಾ ಅಭ್ಯರ್ಥಿಯಿಂದ ನಗರದೇವತೆ ದರ್ಶನ
ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೧೫;  ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರುನಗರದೇವತೆ  ದುರ್ಗಾಂಭಿಕಾ ದೇವಿಯ ದೇವಸ್ಥಾನಕ್ಕೆ ಭೇಟಿ‌ನೀಡಿ‌ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಗಾಯತ್ರಿಯವರು ದೇವಿಯ ದರ್ಶನ ಪಡೆದು ಇಂದಿನಿಂದ ಅಧಿಕೃತವಾಗಿ ಪ್ರಚಾರ ಕಾರ್ಯ ಪ್ರಾರಂಭ ಮಾಡುತ್ತೇವೆ.ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡುವ ನಂಬಿಕೆ ಇದೆ ಎಂದರು.ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಶೇ 33% ಮೀಸಲಾತಿ ನೀಡುತ್ತೇವೆ ಎಂದು  ಹೇಳಿದ್ದರು ಅದರಂತೆ ನೀಡಿದ್ದಾರೆ.ಈ ಬಾರಿ ಕಮಲವನ್ನು ಮುಡಿದುಕೊಂಡು ದೆಹಲಿಗೆ‌ ಹೋಗುವೆ ಎಂದರು.ಈ ಸಂದರ್ಭದಲ್ಲಿ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬಿಜೆಪಿ‌ ನಾಯಕರು  ಸನ್ಮಾನಿಸಿದರು.ಈ ವೇಳೆ ಮುಖಂಡರಾದ ಯಶವಂತರಾವ್ಜಾಧವ್,ರಾಜನಹಳ್ಳಿ‌ಶಿವಕುಮಾರ್ ಹಾಗೂ‌ ಮಹಿಳಾ‌ಮೋರ್ಚಾ ಕಾರ್ಯಕರ್ತರು ಇದ್ದರು.