ಬೆಂಗಳೂರಿನಲ್ಲಿ ಮಾ.17ರಂದು ಅಥಿತಿ ಶಿಕ್ಷಕರ ರಾಜ್ಯ ಸಮ್ಮೇಳನ.

ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.15; ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ರಾಜ್ಯ ಸಂಘದಿAದ ಮಾ.17ರಂದು ಬೆಂಗಳೂರಿನ ಎಸ್‌ಬಿಎಂ ಬ್ಯಾಂಕ್ ಹತ್ತಿರವಿರುವ ಶಿಕ್ಷಕರ ಸದನದಲ್ಲಿ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಅತಿಥಿ ಶಿಕ್ಷಕರ ಸಂಘಧ ಅದ್ಯಕ್ಷ ಕೆ.ರಾಜು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ರಾಜ್ಯ ವಾರ್ಷಿಕ ಸಮ್ಮೇಳವನ್ನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಪಯೋಗಿ ಸಚಿವರಾದ ಸತೀಶ್ ಜಾರಕಿಹೊಳೆಯವರು ವಹಿಸುವರ, ಸಂಘದ ಗೌರವಾದ್ಯಕ್ಷ ವಕೀಲರಾದ ಅನಂತನಾಯ್ಕ, ರಾಜ್ಯದ್ಯಕ್ಷ ಎಚ್.ಎಸ್.ಹನುಮಂತ ಕಾರಟಗಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕರಡಿಗುಡ್ಡ, ವಿಜಯನಗರ ಜಿಲ್ಲಾದ್ಯಕ್ಷ ಲಿಂಗೇಶ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಆದ್ದರಿಂದ ತಾಲೂಕಿನ ಅತಿಥಿ ಶಿಕ್ಷಕರು ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.