ಕಾರು ಅಪಘಾತ: ಕಾಂಗ್ರೆಸ್ ಮುಖಂಡ ಶಿವಾನಂದ್ ಪಾಟೀಲ್ ಗಂಭೀರ ಗಾಯ
ಕಲಬುರಗಿ:ಮಾ.15: ಕಾರು ಅಪಘಾತದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಿವಾನಂದ್ ಪಾಟೀಲ್ ಮರತೂರ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ಜೇವರ್ಗಿ ಪಟ್ಟಣದ ಹೊರವಲಯದಲ್ಲಿನ ಭೂತಪೂರ್ ಕಲ್ಯಾಣ ಮಂಟಪದ ಹತ್ತಿರದ ಹೆದ್ದಾರಿ ಮೇಲೆ ಸಂಭವಿಸಿದೆ.
ಅಪಘಾತ ಹೊಂದಿದ ಕಾರಿನ ಮುಂದಿನ ಗಾಜುಗಳು ಒಡೆದಿದ್ದು, ಗಾಯಾಳು ಶಿವಾನಂದ್ ಪಾಟೀಲ್ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.