ಚಿಂಚೋಳಿ ಕ.ಕ ಉತ್ಸವದಲ್ಲಿ ಪಟೇಲ್ ಮತ್ತು ಅಂಬೇಡ್ಕರ ಸ್ಮರಣ
ಚಿಂಚೋಳಿ,ಸೆ.17- ಕಲ್ಯಾಣ ಕರ್ನಾಟಕೋತ್ಸವ ಎಂದು ಕರೆಯಲಾಗುತ್ತಿರುವ ಇಂದಿನ ಸಂಭ್ರಮಾಚಾರಣೆಯನ್ನು ಈ ಮೊದಲು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನಾಗಿ ಮಾಡಲಾಗುತ್ತಿತ್ತು ಇಂದಿನ ಈ ಸಂಭ್ರಮಾಚರಣೆಗೆ ಮುಖ್ಯ ಕಾರಣ ಸರ್ದಾರ್ ವಲ್ಲಭಾಯಿ ಪಟೇಲ್ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಎಂದು ಸ್ಮರಿಸಲಾಯಿತು.
ತಾಲ್ಲೂಕಿನ ಚಂದಾಪುರ ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ತಾಲ್ಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ನಾವು ಇಂದಿನ ದಿನ ಅಂದರೇ, ಸೆಪ್ಟೆಂಬರ್ 17 1948ರ ಪೂರ್ವದ ಇತಿಹಾಸವನ್ನು ಅರಿತುಕೊಂಡಿರಬೇಕು.ಹಾಗೆ ಅರಿತಾಗ ಮಾತ್ರ ಇಂದಿನ ದಿನದ ಮಹತ್ವ ನಮಗೆ ಅರಿವಾಗುತ್ತದೆ. 1947 ಆಗಸ್ಟ್ 15 ರ ನಂತರ ಇಡೀ ದೇಶದ ತುಂಬೆಲ್ಲಾ ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ರಂಗು ಚೆಲ್ಲಿದ್ದರೆ, ಈ ಹೈದ್ರಾಬಾದ್ ಪ್ರಾಂತದ ತುಂಬೆಲ್ಲಾ ಮಾತ್ರ ರಜಾಕಾರರ ಹಿಂಸೆಯಿಂದ ರಕ್ತ ಚೆಲ್ಲುತ್ತಿತ್ತು, ಇಂತಹ ಪರಿಸ್ಥಿತಿಯನ್ನು ಡಾ.ಅಂಬೇಡ್ಕರ್ ರವರ ಸಲಹೆಯ ಮೇರೆಗೆ ಅಂದಿನ ಗೃಹ ಮಂತ್ರಿಗಳಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ರು ಆಪರೇಷನ್ ಪೆÇೀಲೊ ಎನ್ನುವ ಕಾರ್ಯಾಚರಣೆ ನಡೆಸಿ ಈ ಪ್ರಾಂತ್ಯವನ್ನು ಭಾರತಕ್ಕೆ ಸೇರಿಸಿ ಇಂದಿನ ಈ ಉತ್ಸವಕ್ಕೆ ಕಾರಣರಾದರು ಮತ್ತು ಹೈದ್ರಾಬಾದ ಕರ್ನಾಟಕ ಭಾಗದ ವಿಮೋಚನೆಗಾಗಿ ನಮ್ಮ ಭಾಗದ ಹಲವಾರು ಜನರು ಹೋರಾಟವನ್ನು ಮಾಡಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದ್ದಾರೆ ಅಂತಹವರನ್ನೆಲ್ಲ ಸ್ಮರಿಸಬೇಕು ಎಂದರು.
ಬಳಿಕ ಮಾತನಾಡಿದ ಪುರಸಭೆ ನೂತನ ಅಧ್ಯಕ್ಷ ಆನಂದ ಟೈಗರ್, ನಾನು ಪುರಸಭೆ ಅಧ್ಯಕ್ಷನಾಗಿ ಸರ್ಕಾರಿ ವೇದಿಕೆಯನ್ನು ಹಂಚಿಕೊಳ್ಳುತ್ತಿರುವುದು ಇದೆ ಪ್ರಥಮ ಅದಕ್ಕೆ ಸಂತಸವಾಗಿದೆ ಎಂದು ಕಲ್ಯಾಣ ಕರ್ನಾಟಕದ ಬಗ್ಗೆ ಮಾತನಾಡಿ ವಿಶ್ವ ಕರ್ಮ ಜಯಂತಿಯ ಬಗೆಗೂ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಮೂಡಿಸುವ ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕರಾದ ಅಶೋಕ ಹೂವಿನಭಾವಿ ನಿರೂಪಿಸಿದರೆ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ ಕೊರವಿ ವಂದಿಸಿದರು.