ಕ್ರಿಮಿನಾಶಕ ಮಿಶ್ರಣ ಮಾಡಿದ್ದ ನೀರು ಕುಡಿದು ಎತ್ತು ಸಾವು
ಚಿಂಚೋಳಿ,ಸೆ.17-ತಾಲ್ಲೂಕಿನ ಸುಲೇಪೇಟ ಹೋಬಳಿ ಘಟಕದ ಪೆಂಚನಪಳ್ಳಿ ಗ್ರಾಮದ ಹೊಲವೊಂದರಲ್ಲಿ ಬೆಳೆಗಳಿಗೆ ಸಿಂಪಡಣೆ ಮಾಡಲೆಂದು ಮಿಶ್ರಣ ಮಾಡಿಟ್ಟ ಕ್ರಿಮಿನಾಶಕದ ನೀರನ್ನು ಕುಡಿದು ಎತ್ತು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗ್ರಾಮದ ಸೋಮಣ್ಣ ಹಸಿರಗುಂಡಗಿ ಎಂಬುವವರು ತಮ್ಮ ಹೋಲದಲ್ಲಿ ನೀರಿನೊಂದಿಗೆ ಕೀಟನಾಶಕವನ್ನು ಮಿಶ್ರಣ ಮಾಡಿಟ್ಟಿದ್ದು, ಅದರ ಪಕ್ಕದಲ್ಲೇ ಎತ್ತನ್ನು ಗಿಡಕ್ಕೆ ಕಟ್ಟಿದ್ದರು. ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡ ಎತ್ತು ಕೀಟನಾಶಕ ಮಿಶ್ರಿತ ನೀರನ್ನು ಕುಡಿದು ಸಾವನ್ನಪ್ಪಿದೆ.