ಕಲಬುರಗಿಯಲ್ಲಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಪ್ರಥಮ ಸಮ್ಮೇಳನ ಏರ್ಪಡಿಸಲು ನಿರ್ಧಾರ
ಕಲಬುರಗಿ,ಮಾ.15-ಮಂಗಳುರಿನಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಸಭೆಯ ತಿರ್ಮಾನದಂತೆ ಕಲಬುರಗಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಕಾರ್ಯಕಾರಿ ಸಮಿತಿಯು ಕಲಬುರಗಿ ಮಹಾನಗರದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಪ್ರಥಮ ಸಮ್ಮೇಳನ ಏರ್ಪಡಿಸಲು ಸಮ್ಮತಿಸಿ ಒಪ್ಪಿಗೆಯ ನಿರ್ಣಯ ಕೈಗೊಂಡಿದೆ.
ರಾಜ್ಯ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಮತ್ತು ಕಲಬುರಗಿ ಮಹಾನಗರ ಪಾಲಿಕೆ ಅಧ್ಯಕ್ಷರು ಆಗಿರುವ ವೀರಭದ್ರ ಸಿಂಪಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಲಬುರಗಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನ ಏರ್ಪಡಿಸಲು ಒಪ್ಪಿ ಅದರ ಉದ್ದೇಶ, ರಾಜ್ಯದ ಹತ್ತುಸಾವಿರ ಪ್ರತಿನಿಧಿಗಳ ನೀರೀಕ್ಷೆ , ಅವರ ವ್ಯವಸ್ಥೆ, ಅನುಕೂಲತೆಗಳು, ಅಂದಾಜು ಖರ್ಚು 7,50 ಲಕ್ಷ ರೂ. ಸಿದ್ದಪಡಿಸಲಾಯಿತು. ಇದಕ್ಕೆ ಇತರೆ ಸಂಪನ್ಮೂಲ ಕ್ರೂಡೀಕರಣದ ಯೋಜನೆ ರೂಪಿಸಲು ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಿ, ಏಪ್ರಿಲ್ ಮೊದಲು ವಾರ ಸಭೆ ಕರೆದು ಸಮ್ಮೇಳನದ ದಿನಾಂಕ ಸ್ವಾಗತ ಸಮಿತಿ ಅಧ್ಯಕ್ಷರ ಆಯ್ಕೆ ಮತ್ತು ವಿವಿಧ ಉಪಸಮಿತಿಗಳನ್ನು ರಚಿಸಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳಾದ ಸಿದ್ರಾಮ ಕರಣಿಕ, ಶಿವಾಜಿ ಜಮಾದಾರ, ಶಿವಾನಂದ ಯಳವಂತಗಿ, ಶ್ರೀಕಾಂತ ಶಟ್ಟಿ, ಶಿವಶರಣಪ್ಪ ಮರಗೊಳ, ಸುಭಾಶ್ಚಂದ್ರ ಊ, ಶರಣಪ್ಪ ವಗ್ದರ್ಗಿ , ಜಟ್ಟೆಪ್ಪ ಜಾನಕರ್, ಅವದೂತ ದೇಶಪಾಂಡೆ, ಅಡಿವೆಪ್ಪ ಚಿದ್ರಿ, ರಹಮಾನ ಸಾಬ್, ಆಕ್ರಮ ಅಹ್ಮದ್, ಅಶೋಕ ಕೊಳ್ಳುರ, ಬಾಬುರಾವ ಬಿರಾದಾರ, ಕಲ್ಯಾಣಪ್ಪ ಬಿರಾದಾರ, ಸಿದ್ಧಮ್ಮ, ಕಮಲಾಬಾಯಿ ಇತರರು ಉಪಸ್ಥಿತರಿದ್ದರು.
ಕಲ್ಯಾಣಪ್ಪ ಬಿರಾದಾರ ವಚನ ಗಾಯನದ ಮೂಲಕ ಪ್ರಾರ್ಥಿಸಿದರು ಸಿದ್ರಾಮ ಕರಣಿಕ ಅವರು ವಂದಿಸಿದರು.