ಮಹಿಳೆಯರ ಒಳಗೊಳ್ಳುವಿಕೆಯಿಂದ ಉತ್ತಮ ಸಮಾಜ
ಕಲಬುರಗಿ:ಮಾ.15: ಮಹಿಳೆಯರು ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ, ಕ್ರೀಡೆ ಸೇರಿದಂತೆಎಲ್ಲಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಹೀಗಾಗಿ ಮಹಿಳೆ ಅಬಲೆಯಲ್ಲ. ಆಕೆ ಸಬಲೆ ಎಂದು ನಿಸರ್ಗ ಫ್ಯಾಮಿಲಿ ಹೋಮ್ಸ್‍ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಮಹಾಂತೇಶ ನವಲಕಲ್‍ಅಭಿಪ್ರಾಯಪಟ್ಟರು.
ಮಹಿಳಾ ದಿನಾಚರಣೆ ಅಂಗವಾಗಿ ನಿಸರ್ಗ ಫ್ಯಾಮಿಲಿ ಹೋಮ್ಸ್ ವತಿಯಿಂದ ನಗರದ ಪ್ರೌಢದೇವರಾಯ ಪಿಯುಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿ ಮಾತನಾಡಿದಅವರು, 12ನೇ ಶತಮಾನದಲ್ಲಿ ನುಲಿಯಚಂದಯ್ಯ ಎಂಬ ಶರಣನಕೊಳಲ್ಲಿದ್ದಲಿಂಗ ಕೆಳಗೆ ಬೀಳುತ್ತದೆ.ನನ್ನನ್ನುಧರಿಸುಎಂದು ಇಷ್ಟಲಿಂಗವೇ ಬೆನ್ನು ಹತ್ತಿದರೂಕಾಯಕಕ್ಕೆತಡವಾಗುತ್ತದೆಎಂದು ಮುಂದೆ ಹೊರಟರುಎಂಬ ಘಟನೆಯನ್ನು ವಿವರಿಸಿ ಶರಣರು ಸ್ತ್ರೀ ಸಮಾನತೆತಂದುಕೊಟ್ಟರಲ್ಲದೆಕಾಯಕಕ್ಕೂ ಮಹತ್ವ ನೀಡಿದ್ದರುಎಂದು ತಿಳಿಸಿದರು.
ನಿಸರ್ಗ ಫ್ಯಾಮಿಲಿ ಹೋಮ್ಸ್‍ನ ಕಾನೂನು ಮುಖ್ಯಸ್ಥ ಸಂತೋಷ ವಿರಾದಾರ ಮಾತನಾಡಿ, ಮಹಿಳೆಯರಿಊ ಸಮಾನ ಸ್ಥಾನಮಾನ ಸಿಗಬೇಕು ಎಂಬುದು ಮಹಿಳಾ ದಿನಾಚರಣೆಯಉದ್ದೇಶವಾಗಿದ್ದು, ಆ ದಿಸೆಯಲ್ಲಿ ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಆಚರಿಸಲಾಗುತ್ತದೆಎಂದುಆಚರಣೆಯ ಮಹತ್ವ ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಸವರಾಜಗಾಣೂರೆ ಮಾತನಾಡಿ, ಪ್ರತಿಯೊಂದುಕ್ಷೇತ್ರದಲ್ಲಿ ಮಹಿಳೆಯರ ಸೇರ್ಪಡೆಯನ್ನು, ಒಳಗೊಳ್ಳುವಿಕೆಯನ್ನು ಪ್ರೇರೇಪಿಸಿದಾಗ ಮಾತ್ರಉತ್ತಮ ಸಮಾಜವನ್ನು ನಿರ್ಮಿಸಬಹುದುಎಂದು ಹೇಳಿದರು.
ಇದೇವೇಳೆಯಲ್ಲಿ 13 ಜನ ಮಹಿಳೆಯರನ್ನು ನಿಸರ್ಗ ಫ್ಯಾಮಿಲಿ ಹೋಮ್ಸ್ ವತಿಯಿಂದ ಸನ್ಮಾನಿಸಲಾಯಿತು.ಮಾರ್ಕೆಟಿಂಗ್ ವಿಭಾಗದ ಸಾಗರ ಹಾಲಕಾಯಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಇದ್ದರು.