ಹಳೆ ವಿದ್ಯಾರ್ಥಿಗಳಿಂದ ಗುರುವೃಂದದವರಿಗೆ ಸನ್ಮಾನ
ಶಹಾಬಾದ,ಮಾ.15-ಇಲ್ಲಿನ ಎಂಸಿಸಿ ಶಾಲೆಯಲ್ಲಿ 1980ರಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಿಂದ ಗುರುವೃಂದದವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಇಂದು ತಾವು ಸ್ನಾತಕೋತ್ತರ ಪದವಿ ಪಡೆದು ಇಂಜಿನಿಯರ್ ಹಾಗೂ ವೈದ್ಯರಾಗಿ ಉನ್ನತ ಮಟ್ಟಕ್ಕೇರಲು ಗುರುವೃಂದದವರ ಸಹಕಾರ ಹಾಗೂ ಆಶೀರ್ವಾದವೇ ಕಾರಣ ಎಂಬ ಭಾವನೆ ಹೊತ್ತ ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿ ಕಹಿ-ಸಿಹಿ ಅನುಭವಗಳನ್ನು ನೆನಪಿಸಿಕೊಂಡು ಬೆರಗುಗೊಳಿಸಿ ನಕ್ಕು ನಲಿದರು.
ನಂತರ ಮಹ್ಮದ್ ಖದೀರ್ ಅವರು ಉತ್ತಮ ವಿದ್ಯಾರ್ಥಿ ಎಂದು ಘೋಷಿಸಿ ಹೆಚ್.ಎಸ್.ಮುರಲಿ ಅವರಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಸನ್ಮಾನಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಿತ್ರಕಲಾ ಶಿಕ್ಷಕ ಮಹ್ಮದ್ ಖದೀರ್ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ಸುನೀಲ ಧನ್ನಾ, ಅಣ್ಣಪ್ಪಾ ಸರಡಗಿ, ಭೀಮು ಸಿರಗುಂಡ ಅವರು ಶಾಲು ಹೊದಿಸಿ, ಕೇಕ್ ಕತ್ತರಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.