ಕಲಿಕಾ ಪ್ರೋತ್ಸಾಹಧನ ವಿತರಣೆ
ಧಾರವಾಡ,ಮಾ.15:ಇನ್ನೊಬ್ಬರ ಒಳಿತಿಗಾಗಿ ಬಾಳುವುದೇ ಸರ್ವಶ್ರೇಷ್ಠವಾದುದು. ದಿ. ಆರ್.ಎಸ್. ಹೂಗಾರಅವರುಇನ್ನೊಬ್ಬರ ಏಳಿಗೆಗಾಗಿ ಬದುಕಿಚಿರಸ್ಥಾಯಿಯಾಗಿದ್ದಾರೆಎಂದು ಹುಬ್ಬಳ್ಳಿಯ ಮಾಜಿ ಸಂಸದ ಪ್ರೊ.ಐ. ಜಿ. ಸನದಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಬ್ಯಾಂಕಿಂಗ್‍ಕ್ಷೇತ್ರದ ಭೀಷ್ಮ ದಿ.ಆರ್.ಎಸ್.ಹೂಗಾರದತ್ತಿ ಅಂಗವಾಗಿ ಅವರ 84ನೇ ಜನ್ಮದಿನದ ನಿಮಿತ್ಯ ‘ಆರ್.ಎಸ್.ಹೂಗಾರ ಸೇವಾರತ್ನ ಪ್ರಶಸ್ತಿ-2024’ ಪ್ರದಾನ ಮತ್ತು ಬಡ ವಿದ್ಯಾರ್ಥಿಗಳಿಗೆ ‘ಕಲಿಕಾ ಪ್ರೋತ್ಸಾಹಧನ’ ವಿತರಣೆ ಮಾಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ತಂದೆ-ತಾಯಿಯಋಣತೀರಿಸುವುದು ಎಷ್ಟು ಮುಖ್ಯವೋ ಸಮಾಜದಋಣವನ್ನುತೀರಿಸುವುದು ಅಷ್ಟೇ ಮುಖ್ಯ. ದಿ. ಆರ್.ಎಸ್. ಹೂಗಾರಅವರು ಬ್ಯಾಂಕಿಂಗ್‍ಕ್ಷೇತ್ರದಲ್ಲಿ ಎಷ್ಟೇ ಎತ್ತರಕ್ಕೂ ಬೆಳೆದರೂ ಅವರಲ್ಲಿದ್ದ ಸಾಮಾಜಿಕತುಡಿತ ಅವಿಸ್ಮರಣೀಯವಾದದ್ದು.
ಶ್ರೀಯುತರು ಅಣ್ಣಿಗೇರಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದು ಪುಣ್ಯದಕಾರ್ಯ.ತಮ್ಮಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಬ್ಯಾಂಕಿಂಗ್‍ಕ್ಷೇತ್ರವನ್ನುಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಶಂಕರಣ್ಣ ಮುನವಳ್ಳಿಯವರು ಶಿಕ್ಷಣ ಸಂಸ್ಥೆಗಳನ್ನು ಹಾಗೂ ಸಹಕಾರಿಕ್ಷೇತ್ರವನ್ನುಉನ್ನತ ಮಟ್ಟಕ್ಕೆ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.ಅವರುಜನಮೆಚ್ಚುವಕಾರ್ಯ ಮಾಡಿದ ಮಹಾನುಭಾವರುಎಂದು ಶ್ಲಾಘಿಸಿದರು.
ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅವರು ‘ಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿ-2024’ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿಅವಶ್ಯಕತೆಇದ್ದವರಿಗೆ ಸಹಾಯ ಮಾಡುವುದೇ ಶ್ರೇಷ್ಠ ಧರ್ಮ.ನಾವು ಯಾವುದೇಕಾರ್ಯ ಮಾಡಲಿ ಇನ್ನೊಬ್ಬರನ್ನು ಖುಷಿಪಡಿಸುವುದಕ್ಕಾಗಿಅಲ್ಲ. ನಮ್ಮಆತ್ಮಸಾಕ್ಷಿಗನುಗುಣವಾಗಿಕಾರ್ಯ ಮಾಡಬೇಕು.ನಾವು ಮಾಡಿದ ಒಳ್ಳೆಯ ಕಾರ್ಯಗಳು ಸದಾವಕಾಲದಲ್ಲಿಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಕೆ.ಎಲ್.ಇ. ಶಿಕ್ಷಣ ಸಂಸ್ಥೆಗಳನ್ನು ಬೆಳಗಾವಿಗಿಂತ ಹುಬ್ಬಳ್ಳಿ ಮತ್ತುಧಾರವಾಡದಲ್ಲಿ ಹೆಚ್ಚು ಸ್ಥಾಪಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುವಒಂದು ಅವಕಾಶ ನನಗೆ ಲಭಿಸಿದ್ದು ಖುಷಿಕೊಡುವ ವಿಷಯವಾಗಿದೆ.ಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿಯು ನನಗೆ ಜೀವನದಲ್ಲಿಇನ್ನೂ ಹೆಚ್ಚಿನ ಸಮಾಜಸೇವೆ ಮಾಡಲು ಶಕ್ತಿ ನೀಡಿದೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ದಿ. ಆರ್.ಎಸ್. ಹೂಗಾರ ಭೌತಿಕವಾಗಿ ನಮ್ಮಜೊತೆಇಲ್ಲದಿದ್ದರೂಅವರ ಕಾರ್ಯಗಳು ನಮಗೆಲ್ಲದಾರಿದೀಪವಾಗಿವೆ. ಶಂಕರಣ್ಣ ಮುನವಳ್ಳಿ ಅಂತಹಯೋಗ್ಯ ವ್ಯಕ್ತಿಗಳಿಗೆ ದಿ.ಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿ ಲಭಿಸಿದ್ದು ಅಭಿನಂದನೀಯಎಂದರು.
ಬಡ ವಿದ್ಯಾರ್ಥಿಗಳಾದ ರಾಕೇಶ ಮಂಜುನಾಥಗಡಾದ, ಖುತೆಜಾಬಿ ಕೋಟೂರ, ಪ್ರಜ್ವಲ ಹೊನ್ನಳ್ಳಿ, ವರ್ಷಾ ಮೋಹನ ಗದಗಅವರಿಗೆ ದಿ. ಆರ್.ಎಸ್.ಹೂಗಾರದತ್ತಿ ಪರವಾಗಿ ಕಲಿಕಾ ಪ್ರೋತ್ಸಾಹಧನ ನೀಡಿಗೌರವಿಸಲಾಯಿತು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿವಾನಂದ ಭಾವಿಕಟ್ಟಿ ಸನ್ಮಾನ ಪತ್ರ ವಾಚಿಸಿದರು.ಶಂಕರ ಕುಂಬಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಸಂಜೀವಕುಲಕರ್ಣಿ, ಎಫ್.ಟಿ.ಭಾವಿಕಟ್ಟಿ, ಕೆ.ಎಂ.ಅಂಗಡಿ, ಎಸ್.ಎಂ. ದಾನಪ್ಪಗೌಡರ, ನಿಂಗಣ್ಣಕುಂಟಿ, ಜಿ.ಬಿ. ಸಜ್ಜನರ, ಸುರೇಶ ಹೊರಕೇರಿ, ಚಿದಂಬರ ನಿಂಬರಗಿ, ಡಾ.ಶರಭೇಂದ್ರಸ್ವಾಮಿ ಅಶೋಕ ಚಿಕ್ಕೋಡಿ, ಮಹಾಂತೇಶ ನರೇಗಲ್. ಅನಿಲ ಮೇತ್ರಿ, ಚಿದಾನಂದ ಮಾಸನಕಟ್ಟಿ, ಸುರೇಶ ಹಿರೇಮಠ, ಮಕ್ಕಳು ಪಾಲಕರು ಸೇರಿದಂತೆ ಮುಂತಾದವರಿದ್ದರು.