ಅಂಗನವಾಡಿ ಮೇಲೆ ಲೋಕಾಯುಕ್ತ ದಾಳಿ
ಕಲಬುರಗಿ,ಮಾ.15: ಲೋಕಾಯುಕ್ತ ಎಸ್‍ಪಿ. ಜಾನ್ ಆಂಟೋನಿ ಮತ್ತು ಸಿಬ್ಬಂದಿ ಇಲ್ಲಿನ ಕೃಷ್ಣಾ ನಗರ ಮತ್ತು ಹನುಮಾನ್ ನಗರದ ಅಂಗನವಾಡಿಗಳ ಮೇಲೆ ದಾಳಿ ಮಾಡಿ ಮಕ್ಕಳು ಮತ್ತು ಬಾಣತಿಯರಿಗೆ ನೀಡುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು.
ಅಂಗನವಾಡಿಗಳಲ್ಲಿ ಮಕ್ಕಳು ಬಾಣಂತಿಯರಿಗೆ ಮೊಟ್ಟೆಗಳನ್ನು ನೀಡಲಾಗುತ್ತಿದ್ದು, ತೂಕದ ಪ್ರಮಾಣ ಸರಿಯಾಗಿ ಇರುವುದಿಲ್ಲ ಎಂದು ಆಕ್ಷೇಪಣೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತೂಕದ ಯಂತ್ರಗಳ ಮುಖಾಂತರ ಮೊಟ್ಟೆಗಳ ತೂಕ ಪರಿಶೀಲನೆ ನಡೆಯುತ್ತಿದೆ.
ಒಂದು ಮೊಟ್ಟೆಯ ತೂಕ ನಿಯಮದ ಪ್ರಕಾರ 50 ಗ್ರಾಂ ಇರಬೇಕು.ಆದರೆ ಕಲ್ಬುರ್ಗಿ ಮತ್ತು ನಗರ ವ್ಯಾಪ್ತಿಯಲ್ಲಿ ಯಾವುದೇ ಮೊಟ್ಟೆ 50 ಗ್ರಾಂ ಇರುವದಿಲ್ಲ.ಮೊಟ್ಟೆಯ ತೂಕ 34 ಗ್ರಾಂ 24. ಗ್ರಾಂ. ಇರುತ್ತದೆ ಎನ್ನಲಾಗಿದೆ.ಪರಿಶೀಲನೆ ಸಂದರ್ಭದಲ್ಲಿ
ಆಹಾರ ಸುರಕ್ಷತೆ, ತೂಕ ಮತ್ತು ಅಳತೆ ಇಲಾಖೆ ಇನ್ಸ್ಪೆಕ್ಟರ್‍ಗಳು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.