ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಸಮಗ್ರ ಅಭಿವೃದ್ಧಿಗೆ ಶ್ರಮ ; ಶಶೀಲ್ ನಮೋಶಿ
ಕಲಬುರಗಿ ; ಮಾ.15:ಎಚ್ಕೆಇ ಸಂಸ್ಥೆಗೆ ನೂತನ ಸದಸ್ಯತ್ವ ನೋಂದಣಿಗೆ ನನ್ನ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಎಚ್ಕೆಇ ಸಂಸ್ಥೆ ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶೀಲ್ ನಮೋಶಿ ಹೇಳಿದರು.
ಈಗಾಗಲೇ ಸದಸ್ಯತ್ವ ಪಡೆದ ಕುಟುಂಬಗಳಿಗೆ ನೂತನ ಸದಸ್ಯತ್ವ ನೀಡಲಾಗುವುದು. ಆರೋಗ್ಯ ವಿಮೆ, ನಸಿರ್ಂಗ್ ಸೇವೆ ಹೀಗೆ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
9 ಗ್ಯಾರಂಟಿಗಳು
ಎಚ್ಕೆಇ ಸಂಸ್ಥೆಯ ಬೋಧಕ ಸಿಬ್ಬಂದಿ ವರ್ಗಕ್ಕೆ 7ನೇ ವೇತನ ಆಯೋಗದ ಏಕರೂಪದ ವೇತನ ನೀಡಲು ಬದ್ದ ಅಧ್ಯಕ್ಷರಾಗಿ ಮೂರು ತಿಂಗಳೊಳಗಾಗಿ ಜಾರಿಗೆ ತರುತ್ತೇನೆ. ಬೋಧಕೇತರ ಸಿಬ್ಬಂದಿ ವರ್ಗದ ವೇತನ ಶ್ರೇಣಿ ಹೆಚ್ಚಳ, ಹೊಸ ಸದಸ್ಯತ್ವ ಅಭಿಯಾನ, ಸಂಸ್ಥೆಯ ಸರ್ವ ಸದಸ್ಯರಿಗೆ ಆರೋಗ್ಯ ವಿಮೆ, ಬಸವೇಶ್ವರ ಮತ್ತು ಸಂಗಮೇಶ್ವರ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸಾ ಸೌಲಭ್ಯ, ಎಲ್ಲ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ಕ್ರೀಡಾ ಮೈದಾನ ಒಳಗೊಂಡ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ, ಮಾನವ ಸಂಪನ್ಮೂಲ ಬಳಕೆ, ಎಚ್ಕೆಇ ಸೊಸೈಟಿಯ ಅಭಿವೃದ್ಧಿ ಕಾಮಗಾರಿಗಳು, ಇತರೆ ಆರೋಗ್ಯ ಸಂಬಂಧಿ ಕಾರ್ಯಚಟುವಟಿಕೆಗಳಲ್ಲಿ ವ್ಯವಹಾರದಲ್ಲಿ ಭಾಗಿಯಾಗದಂತೆ ಎಚ್ಚರವಹಿಸುವೆ ಎಂದು ಗ್ಯಾರಂಟಿಗಳ ಬಗ್ಗೆ ವಿವರಣೆ ನೀಡಿದರು.
ನಮೋಶಿ ಪೆನೆಲ್ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಾ ಭೀಮಳ್ಳಿ, ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಶರಣಬಸಪ್ಪ ಹರವಾಳ, ಅರುಣಕುಮಾರ ಪಾಟೀಲ, ವಿಜಯಕುಮಾರ್ ದೇಶಮುಖ, ಶಿವಶಶರಣಪ್ಪ ಸೀರಿ, ಉದಯಕುಮಾರ್ ಚಿಂಚೋಳಿ, ಡಾ. ಕೈಲಾಸ ಬಿ. ಜಿ.ಪಾಟೀಲ್, ಡಾ. ರಾಜೇಶ ಎಸ್. ವಾಲಿ, ನಾಗರಾಜ್ ನಿಗ್ಗುಡಗಿ, ಮಹಾದೇವ ಖೇಣಿ, ಮಂಜುನಾಥ ಹೂಲಿ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರೆ ಎಂದು ತಿಳಿಸಿದರು.
ಮಹಾದೇವಪ್ಪ ರಾಂಪೂರೆ ಕಾಲೇಜಿನ ವಿದ್ಯಾರ್ಥಿಗಳ ಶಿಷ್ಯವೇತನದಲ್ಲಿ ಆಗಿರುವ ಹಗರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು. ಈ ದಿಸೆಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಿರಂತರವಾಗಿರಲಿದೆ.ಬಸವೇಶ್ವರ ಆಸ್ಪತ್ರೆ ಸಂಪೂರ್ಣ ಬದಲಾಯಿಸಿ, ಸೂಪರ್ ಸ್ಪೇಷಾಲಿಟಿ ಮಾಡಿ ಮೇಲ್ದರ್ಜೆಗೆ ಏರಿಸಲಾಗುತ್ತದೆ.