ವಿಶ್ವ ಮಹಿಳಾ ದಿನಾಚರಣೆ ನಿರ್ಗತಿಕರ ಬಂಧು ನಿಜ್ಜಪ್ಪ ಹಿರೇಮನಿ ದಂಪತಿಗಳಿಗೆ ಸನ್ಮಾನ
ಅಥಣಿ :ಮಾ.15: ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯವಾಗಿ ಹಾಗೂ ಮಹಿಳಾ ಜಾಗೃತಿ ಕೇಂದ್ರ ಅಥಣಿ ವತಿಯಿಂದ ಮಹಿಳೆಯರಿಗಾಗಿ ವಿವಿಧ ಮನೋರಂಜನೆ ಕಾರ್ಯಕ್ರಮವನ್ನು ಆರ್ ಎಚ್ ಕುಲಕರ್ಣಿ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು ಈ ಸಮಾರಂಭದಲ್ಲಿ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ನಿಜಪ್ಪ ಹಿರೇಮನಿ ದಂಪತಿಗಳಿಗೆ ಮಹಿಳಾ ಜಾಗೃತಿ ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮುಖಂಡರಾದ ಗಿರೀಶ ಬುಟಾಳಿ ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಆರ್ಥಿಕವಾಗಿ ರಾಜಕೀಯವಾಗಿ, ರಕ್ಷಣೆ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಅದರಂತೆ ಅನಾಥರ ನಿರ್ಗತಿಕರ ಹಾಗೂ ಬಡವರ ಸೇವೆಯಲ್ಲಿ ತೊಡಗಿರುವ ನಿಜಪ್ಪಾ ಹಿರೇಮನಿ. ಸಂಗೀತಾ ಹಿರೇಮನಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಮುದಕಣ್ಣವರ, ಸತ್ಯಪ್ಪ ಬಾಗನ್ನವರ, ಅರುಣ ಮುದಕಣ್ಣವರ, ರೋಹಿಣಿ ಯಾದವಾಡ, ಗೀತಾ ತೋರಿ. ಗಿರೀಜಾ ಮಡಿಕೇಶ್ವರ. ಸೇರಿದಂತೆ ಹಲವಾರು ಮಹಿಳೆಯರು ಉಪಸ್ಥಿತರಿದ್ದರು.