ಮಹಿಳೆಯರ ಕಲ್ಯಾಣಕ್ಕೆ ವಿಶ್ವ ಸಂಸ್ಥೆ ಹಣ ಹೂಡಿಕೆ: ಭಾರತಿ ಪಾಟೀಲ
ವಿಜಯಪುರ,ಮಾ.15:ವಿಶ್ವ ಸಂಸ್ಥೆಯು ಈ ವರ್ಷ ಮಹಿಳೆಯರ ಕಲ್ಯಾಣಕ್ಕೆ ಹಣ ಹೂಡಿಕೆ ಮಾಡಿ ಪ್ರಗತಿಯನ್ನು ಇಮ್ಮಡಿಗೊಳಿಸಿ ಆಥಿ9ಕ ಸಾಮಥ್ಯ9ವನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ ಎಂದು ಹಿರಿಯ ಸಾಹಿತಿ ಭಾರತಿ ಪಾಟೀಲ ಹೇಳಿದರು .
ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯ ಐ.ಕ್ಯೂ .ಎ ಸಿ ಸಾಂಸ್ಕ್ರತಿಕ ವಿಭಾಗ ಮತ್ತು ಮಹಿಳಾ ಸಬಲೀಕರಣ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದಿನವು ಲಿಂಗ ಸಮಾನತೆ ಮತ್ತು ಒಳಗೊಳ್ಳುವಿಕೆಗೆ ದಾರಿದೀಪವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಐ.ಎಸ್ .ಕಾಳಪ್ಪನವರ ಅವರು, ಮಹಿಳೆಯರು ಸಾಮಾಜಿಕ, ಆಥಿ9ಕ, ಸಾಂಸ್ಕ್ರತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವ ದಿನವಾಗಿದೆ ಎಂದು ಹೇಳಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಉಪಪ್ರಾಚಾಯ9 ಪೆÇ್ರ. ಪ್ರಭುಲಿಂಗ ತೋಳನೂರ ಅವರು ಮಾತನಾಡಿ, ಈ ಅಭಿಯಾನವು ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ನಿಣಾ9ಯಕ ಪಾತ್ರವನ್ನು ವಹಿಸುತ್ತದೆ ಮತ್ತು ಮಹಿಳೆಯರ ಹಕ್ಕುಗಳನ್ನು, ಮತದಾನದ ಹಕ್ಕುಗಳನ್ನು ಪ್ರತಿಪಾದಿಸುವ ದಿನವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುಪ್ರಿಯಾ ಸುರಪುರ ಛಾಯಾಚಿತ್ರ ಪ್ರದಶಿ9ಸಿದರು.
ಕಾಯ9ಕ್ರಮದ ವೇದಿಕೆಯಲ್ಲಿ ಐ.ಕ್ಯೂ.ಎಸಿ ಸಂಯೋಜಕ ವ್ಹಿ.ಎಸ್. ನಂದೇಶ್, ಡಾ. ಜಯಶ್ರೀ ಬೀರಪ್ಪ, ಡಾ. ಆರ್. ಜಿ.ಕಮತರ, ಪೆÇ್ರ ಅನಿತಾ ಡೊಳ್ಳಿ ಡಾ.ಕೆ ಎ. ಪಾಟೀಲ, ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾಥಿ9ನಿಯರು ಭಾಗವಹಿಸಿದ್ದರು.
ಕುಮಾರಿ ಶ್ರೇಯಾ ವಾಲೀಕಾರ ಸ್ವಾಗತಿಸಿದರು. ನಿಖಿತಾ ಮಸಳಿ ,ಅಕ್ಷತಾ ನಿರೂಪಿಸಿದರು. ಭ್ರಮರಾಂಬ ವಂದಿಸಿದರು.