ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಹುಬ್ಬಳ್ಳಿ,ಮಾ.15: ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಅನುದನಾಕ್ಕಾಗಿ ಪರಿತಪಸಿಂತಾಗಿತ್ತು, ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ಪೂರ್ವ ಕ್ಷೇತ್ರದ ಶಾಸಕರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಹೇಳಿದರು.
ಅವರು, ಪೂರ್ವ ಕ್ಷೇತ್ರದ ವಾರ್ಡ್ ಸಂಖ್ಯೆ 73ರಲ್ಲಿ 5ಕೋಟಿ, ವೆಚ್ಚದಲ್ಲಿ ಸಿಸಿ ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ವರ್ಷಕೂಡ ಕಳೆದಿಲ್ಲ. ಆಗಲೇ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹತ್ತಾರು ಕೋಟಿ ರೂ. ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ನೂರಾರು ಕೋಟಿರೂ. ಅನುದಾನ ತಂದು ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ದ್ಯಾಮಣ್ಣ ಡೋಂಗಿ, ಗಣೇಶ ಪೂಜಾರ, ಚಂದ್ರು ಪೂಜಾರ, ಸುರೇಶ ಶೆಟವಾ, ರಾಮು ಪೂಜಾರ, ಸಂತೋಷ ಪೂಜಾರ, ದೇವಂದ್ರ ದುಂಡಿ, ಬಸವರಾಜ ಹಂಚಿನಮನಿ, ಧರ್ಮರಾಜ ಪೂಜಾರ, ಬಸವರಾಜ ದೇವರಮನಿ, ಪ್ರಕಾಶ ಒಂಟಮನಿ, ಸುಭಾಷ ಪೂಜಾರ, ಶಾಮ ರಾಮನಾಥ, ಮೀರಪ್ಪ ರಘು ಸೇರಿದಂತೆ ಮೊದಲಾದವರು ಇದ್ದರು.