ಡಾ. ಪಿ.ಎಂ. ಬಿರಾದಾರ ಅವರಿಗೆ ಗೃಹ ಸನ್ಮಾನ
ಕಲಬುರಗಿ:ಮಾ.15:ಇತ್ತೀಚೆಗೆ ನಗರದ ಚರ್ಮರೋಗ ತಜ್ಞರಾದ ಡಾ. ಪಿ.ಎಂ. ಬಿರಾದಾರ ಅವರಿಗೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2023-24ನೇ ಸಾಲಿನ ಗೌರವ ಡಾಕ್ಟರೇಟ್ ಪದವಿ ಕೊಟ್ಟು ಗೌರವಿಸಿದೆ. ಚರ್ಮರೋಗ ಶಾಸ್ತ್ರದ ಅಧ್ಯಯನ, ಅಧ್ಯಾಪನ ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿನ ಡಾ. ಬಿರಾದಾರರವರ 45 ವರ್ಷಗಳ ಸೇವೆ ಗುರುತಿಸಿ ಗೌಡ ಪ್ರಶಸ್ತಿಗೆ ಭಾಜನರಾಗಿರುವಂತಹ ಡಾ. ಪಿ.ಎಂ. ಬಿರಾದಾರ ಅವರಿಗೆ ಅಂಡಗಿ ಪ್ರತಿಷ್ಠಾನ ಟೇಂಗಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಕೃಷಿ ಉಪ-ನಿರ್ದೇಶಕರಾದ ಬಸವರಾಜ ಎನ್. ಪುಣ್ಯಶೆಟ್ಟಿ ಹಾಗು ಶಿವರಾಜ ಅಂಡಗಿಯವರು ಉಪಸ್ಥಿತರಿದ್ದರು.