ಚಿಂತೆಯೇ ಬೇರೆ, ಚಿಂತನವೇ ಬೇರೆ :ಮಸೂತಿಶ್ರೀ
ತಾಳಿಕೋಟೆ:ಮಾ.15: ಮಾನವರಾದ ನಾವು ಸಾಧನೆ ಮಾಡಲು ಮುಂದಾದರೆ ಸಾಧನೆ ಇಲ್ಲದೇ ಏನು ಸಾಧನೆಯಾಗದು ಕಾರಣ ದುಡಿತದ ಶಕ್ತಿ ಎಂಬುದು ಬರಬೇಕು ಅಂದರೆ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಗುರುವಾರರಂದು ಜರುಗಿದ 4ನೇ ದಿನದಂದು ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಚಿಂತೆ ಎಂಬುದರಿಂದ ನಿದ್ದೆ ಬರುವದಿಲ್ಲಾ ಚಿಂತನಕ್ಕೆ ನಿದ್ದೆ ಬರುತ್ತದೆ ಕಾರಣ ಚಿಂತೆಯೇ ಚಿಂತನವೇ ಬೇರೆ ಎಂದರು. ಹತ್ತು ಹಡಿಯುವದಕ್ಕಿಂತ ಒಂದು ಮುತ್ತು ಹಡಿಯಿರಿ ಆಧ್ಯಾತ್ಮದ ವಿಚಾರ ಆಲಿಸಿ ಪಾಲಿಸಿದರೆ ಮುತ್ತಿನಂತ ಮಕ್ಕಳು ಜನ್ಮತಾಳಲು ಸಾಧ್ಯವೆಂದ ಶ್ರೀಗಳು ಶ್ರೀ ಖಾಸ್ಗತರ ಹಾಗೂ ಶ್ರೀ ಶರಣಮುತ್ಯಾರವರ ಕುರಿತು ಪ್ರಸ್ಥಾಪಿಸಿದರು ಹಾವಿನ ಮರಿಗಳಂತಹ ಜನ್ಮ ಬೇಡಾ ನಾಯಿ ಮರಿಗಳಂತಹ ಮರಿಗಳು ಬೇಡಾ ಹಡಿದರೆ ಮುತ್ತಿನಂತ ಮಕ್ಕಳು ಜನ್ಮ ತಾಳಬೇಕಾದರೆ ಆದ್ಯಾತ್ಮದ ಸವಿಸವಿದರೆ ಮಾತ್ರ ಮುತ್ತಿನಂತಹ ಮಕ್ಕಳು ಜನ್ಮ ತಾಳುತ್ತವೆ ಎಂದರು.
1797ರಲ್ಲಿ ದೇವರ ಗುಡಿಗೆ ಹೋದ ರಾಚಮ್ಮ ಅಂದು ಶುಕ್ರವಾರ ಬೆಳಗಿನ ಸಮಯ ಗಂಡು ಮಗುವನ್ನು ಜನ್ಮ ನೀಡುತ್ತಾಳೆ ಗುರುವಿನ ಆಶಿರ್ವಾದದ ಫಲದಿಂದ ಒಳ್ಳೆಯ ಪ್ರತಿಭಾವಂತ ಮಗನಾಗುತ್ತಾನೆಂದು ಗುರುಗಳು ಹೇಳಿದ ವಾಣಿ ರಾಚಮ್ಮಳ ಮನದಲ್ಲಿ ಮೇಲಿಂದ ಮೇಲೆ ಎತ್ತಿ ತೋರಿಸುತ್ತಿತ್ತು ಮಾನವ ಶ್ರೇಷ್ಠನಾಗಬೇಕಾದರೆ ದಾನ ಸಾಹಿತ್ಯದಾರ ಮಾಡುವವ ಶ್ರೇಷ್ಠನಲ್ಲಾ, ಅಡುಗೆ ಮಾಡುವವ ಶ್ರೇಷ್ಠನಲ್ಲಾ, ನೀಡುವವ ಶ್ರೇಷ್ಠನಲ್ಲಾ ನೀಡುವವರಕ್ಕಿಂತ ತಾಟು ತೆಗೆಯುವವರು ಶ್ರೇಷ್ಠರೆಂದರು.
ಹಂಪಿ ವಿರುಪಾಕ್ಷನ ಸೇವೆಯನ್ನು ಮಾಡಿ 40 ವರ್ಷಗಳ ಕಾಲ ಮಂದಿರದಲ್ಲಿ ಕಸ ಹೊಡೆಯುವ ಕಾರ್ಯ ಮಾಡಿ ದೇವನ ವಲುಮೆಯಿಂದ ಪಡೆದ ಮಗು ದೇವತಾ ಸ್ವರೂಪಿಯೇ ಆಗಲಿದ್ದಾನೆಂಬ ಗುರುಗಳ ಹಾಗೂ ಸಾದು ಸಂತರ ವಾಣಿಗಳಿಂದ ಹೊರಬಂದಂತಹ ವಿಷಯ ಕೇಳಿದ ರಾಚಮ್ಮ ಹಾಗೂ ಪತಿ ಗುರುಲಿಂಗಯ್ಯ ಹರ್ಷಬರೀತರಾಗಿದ್ದರಲ್ಲದೇ ಅವರ ಊರಿನ ಜನತೆ ಹಾಗೂ ತವರ ಮನೆಯವರಲ್ಲಿಯೂ ಕೂಡಾ ಎಲ್ಲಿಲ್ಲದ ಉತ್ಸಾಹ ಮೂಡಿತ್ತೆಂದು ಶ್ರೀಗಳು ನುಡಿದರು.
ರಾಚಮ್ಮ ಬ್ರಹ್ಮ ಮೋಹರ್ತದಲ್ಲಿ ಗರ್ಬ ಧರಿಸಿದ ಕೂಡಲೇ ತವರು ಮನೆಗೆ ಬರುತ್ತಾಳೆ ಆ ಹಿರೇಮಠದ ಕುಟುಂಭಕ್ಕೆ ಬಹಹಳೇ ಸಂತೋಷವೆನಿಸುತ್ತದೆ ಗರ್ಭಧರಿಸಿದ 8 ತಿಂಗಳಲ್ಲಿಯೇ ಲಿಂಗ ತಂದು ಗುರುಗಳು ಹೇಳಿದಂತೆ ಹೊಟ್ಟೆಗೆ ಕಟ್ಟಿ ತುಂಬಿದ ಕೊಡದಲ್ಲಿಯ ನೀರು ಲಿಂಗುದ ಮೇಲೆ ಹಾಕುತ್ತಾ ಸಾಗಿದರೆ 8 ತಿಂಗಳಲ್ಲಿ ಹುಟ್ಟಿದ ಮಗು ಈ ಒಂದು ಮಹಾ ಪೂಜೆಯಿಂದ ಬಾಳಿದರೆ 900 ನೂರು ವರ್ಷ ಬಾಳುತ್ತದೆ ಎಂಬ ಗುರುಗಳ ಆಶಿರ್ವಾದದಂತೆ ಈ ಕಾರ್ಯಕ್ಕೆ ಮುಂದಾದುದ್ದರಿಂದಲೇ ರಾಚಮ್ಮಳಿಗೆ ಮುತ್ತಿನಂತ ಮಗು ಜನ್ಮ ತಾಳಲು ಕಾರಣವಾಯಿತೆಂದು ಶ್ರೀಗಳು ನುಡಿದರು.
ಇದು ಅಲ್ಲದೇ ಭೂಮಂಡಲದಲ್ಲಿ ಭಕ್ತಿಯನ್ನುವಂತಹದ್ದಕ್ಕೆ ಬಹಳೇ ಕಷ್ಟವಾಗುತ್ತದೆ ಆದರೆ ಭಕ್ತಿ ಎಂಬುದನ್ನು ಬಿಡಬಾರದೆಂದು ಹೇಳಿದ ಶ್ರೀಗಳು ಬಿಸಿಲಿನ ಧಃಗೆಯಲ್ಲಿ ಬಿತ್ತಿದ ಬೆಳೆಗೆ ಶರಣರ ಆಶಿರ್ವಾದದಿಂದ ಮಳೆ ಬಂದಾಗ ಯಾವ ರೀತಿ ರೈತನಿಗೆ ಸಂತೋಷವಾಗುತ್ತದೆ ಅಂತಹ ಮಗು ಜನ್ಮ ತಾಳಿದಕ್ಕೆ ಸಂತೋಷ ರಾಚಮ್ಮನವರ ಕುಟುಂಬಕ್ಕೆ ಆಗಿತ್ತೆಂದರು. ಜೋಳ ಹೊಲದಲ್ಲಿ ಬೆಳೆದು ಹಿಟ್ಟಾಗಿ ರೊಟ್ಟಿಯಾಗಲು ಹಂಚಿನ ಕಾವಿನಿಂದ ಸುಟ್ಟು ರೊಟ್ಟಿಯಾಗಿ ಮಾರ್ಪಟ್ಟು ತಣ್ಣಗಾಗಿ ಶಿಷ್ಯನ ಜೋಳಿಗೆಯಲ್ಲಿ ಬಿದ್ದು ಗುರುವಿನ ಊಟದಲ್ಲಿ ರೋಟ್ಟಿ ಇದ್ದಾಗ ಯಾವ ರೀತಿ ಕಷ್ಟ ಪಟ್ಟು ತನಗೆ ಮೋಕ್ಷ ದೊರೆಯಿತು ಎಂಬುದನ್ನು ಗಮನಿಸುತ್ತದೆ ಯೋ ಅದೇ ರೀತಿ ರಾಚಮ್ಮ ಈ ದಂಪತಿಗಳಿಗೆ ಗಂಡು ಮಗು ಜನ್ಮ ತಾಳಿದಕ್ಕೆ ಹರ್ಷವನ್ನುಂಟು ಮಾಡಿತ್ತೆಂದು ಶ್ರೀಗಳು ನುಡಿದು ಪುರಾಣವನ್ನು ಮುಂದುವರೆಸಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.