17ರಂದು ಕರಡ್ಯಾಳ ಗುರುಕುಲದಲ್ಲಿ ವಿಚಾರ ಸಂಕಿರಣ ಹಾಗೂ ಕವಿ ಗೋಷ್ಠಿ : ಶಂಕರ ಹಲಗತ್ತಿ
ಬೀದರ್:ಮಾ.15: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿ ಇವುಗಳ ಸಹಯೋಗದೊಂದಿಗೆ ಕರ್ನಾಟಕ 50ರ ಸಂಭ್ರಮದಡಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕøತಿಕ ಸಂಭ್ರಮ ಕುರಿತು ವಿಚಾರ ಸಂಕೀರ್ಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, 17ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜಾ ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಸಾನಿಧ್ಯ ವಹಿಸಲಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾದ ಬಸವ ಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡುವರು. ಮಾಜಿ ಜಿಲ್ಲಾ ಪಂಚಾಯಿತಿಯ ಸದಸ್ಯ ಶಕುಂತಲಾ ಬೆಲ್ದಾಳೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲ್ಬುರ್ಗಿಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ, ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಸಂಜುಕುಮಾರ ಜುಮ್ಮಾ, ಭಾಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಪ್ರಗತಿಪರ ಚಿಂತಕ ಎಂ.ಎಸ್ ಮನೋಹರ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಡಳಿತ ಅಧಿಕಾರಿ ಮೋಹನ್ ರೆಡ್ಡಿ, ಚೆನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಬಸವರಾಜ ಮೋಳ್ಕೆರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಬೆಳಿಗ್ಗೆ 11 ಗಂಟೆಗೆ ಒಂದನೇ ಗೋಷ್ಠಿ ಆರಂಭವಾಗಲಿದ್ದು, ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್ ಪಾಟೀಲ್ ಅವರು ಗಡಿಯಲ್ಲಿ ಕನ್ನಡ ಕಿಚ್ಚು ಹಚ್ಚಿದ ಭಾಲ್ಕಿ ಹಿರೇಮಠ ಸಂಸ್ಥಾನ ಕುರಿತು ಮಾತನಾಡುವರು. ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಗಡಿ, ಸಾಹಿತಿ ಗಣಪತಿ ಭೂರೆ, ರಾಜು ಜುಬರೆ ಗೋಷ್ಟಿ ಕುರಿತು ಪ್ರತಿಕ್ರಿಯೆಸುವರು. ವಿಶ್ರಾಂತ ಪ್ರಾಚಾರ್ಯರಾದ ಸೋಮನಾಥ ನುಚ್ಛ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2:30 ಗಂಟೆಗೆ ಎರಡನೇ ಗೋಷ್ಠಿ ನಡೆಯಲಿದ್ದು, ಅಕ್ಕಲಕೋಟ ಸಾಹಿತಿ ಗುರುಲಿಂಗಪ್ಪ ಧಬಾಲೆ ಅವರು ಬೀದರ್ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿಷಯ ಮಂಡಿಸುವರು. ಸಾಹಿತಿ ಬಸವರಾಜ ಬಲ್ಲೂರ್, ಪತ್ರಕರ್ತ ಬಸವರಾಜ ಪ್ರಭಾ, ಶಿವಪ್ರಕಾಶ ಕುಂಬಾರ ಪ್ರತಿಕ್ರಿಯೆ ನೀಡುವರು. ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸುವರು. ಶಿವಾನಂದ ಬಾವಿಕಟ್ಟಿ ಕಾರ್ಯಕ್ರಮ ಸಂಯೋಜಿಸುವರು. ಮಧ್ಯಾಹ್ನ 4:00ಗೆ ಕವಿ ಗೋಷ್ಠಿ ಜರುಗಲಿದ್ದು, ಧಾರವಾಡ ಹಿರಿಯ ಕವಿ ಎಸ್ ಎಸ್ ಚಿಕ್ಕಮಠ ಚಾಲನೆ ನೀಡುವರು. ಕವಿಗಳು ಹಾಗೂ ನ್ಯಾಯವಾದಿಗಳು ಮುಧೋಳ್ನ ಪ್ರಕಾಶ ವಸ್ತ್ರದ್ ಅತಿಥಿಗಳಾಗಿ ಜೊತೆಗೆ ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕೀರ್ತಿ ಲತಾ ಹೊಸಳೆ, ಜಗದೇವಿ ದುಬಲಗುಂಟೆ, ಚೆನ್ನಮ್ಮವಲ್ಲೆಪುರೆ, ಪುಷ್ಪಾ ಕನಕ, ವೀರಣ್ಣ ಕುಂಬಾರ, ರಮೇಶ , ಮಹೇಶ ಬನ್ನಾಳೆ, ಶ್ರೀದೇವಿ ಶಾಂತಯ್ಯ ಸ್ವಾಮಿ, ಸುಜಾತಾ ಹಡಗಲಿ, ಮಹಾದೇವಿ ಗೋಖಲೆ, ಕೆ.ಎಚ್ ನಾಯಕ, ಸುನಿತಾ ನೂರಂದಪ್ಪ ಬಾಳುರೆ, ಮಹಾಲಕ್ಷ್ಮಿ ಕರಿಮಣಿ, ಲಕ್ಷ್ಮಣ ಮೇತ್ರೆ, ಈರಣ್ಣ ಅಗಳಗಟ್ಟಿ, ಚಿದಾನಂದ ಮಾಸನಕಟ್ಟಿ, ಕೃಷ್ಣಮೂರ್ತಿ ಕುಲಕರ್ಣಿ, ಎ.ಎಲ್ ದೇಸಾಯಿ ಕವನ ವಾಚನ ಮಾಡುವರು. ಗುರು ಹಿರೇಮಠ ಕಾರ್ಯಕ್ರಮ ಸಂಯೋಜಿಸುವರು.
ಜೊತೆಗೆ ಸಂಜೆ 6 ಗಂಟೆಗೆ ಸಮರೋಪ ಸಮಾರಂಭ ಜರುಗಲಿದ್ದು ಬಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಸಾನಿಧ್ಯ ವಹಿಸಲಿದ್ದು ಪೂಜ್ಯ ಮಹಾಲಿಂಗ ದೇವರು ಕಾರ್ಯಕ್ರಮದ ನೇತೃತ್ವ ವಹಿಸುವರು. ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಸಿದ್ದರಾಮ ಗೊಗ್ಗ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಧಾರವಾಡ ಆಕಾಶ ವಾಣಿ ವಿಶ್ರಾಂತ ನಿಲಯ ನಿರ್ದೇಶಕ ಸಿ.ಯು ಬೆಳ್ಳಕ್ಕಿ ಸಮಾರೋಪ ನುಡಿ ನುಡಿಯುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಶಂಕರ ಕುಂಬಿ ಕಾರ್ಯಕ್ರಮ ಸಂಯೋಜಿಸುವರು. ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಧಾರವಾಡನ ಸಾಹಿತಿ ಸದಾಶಿವ ಮರ್ಜಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಸಮಾಜ ಕಾರ್ಯಕರ್ತ ಮಹೇಶ ಗೋರ್ನಾಳ್ಕರ್ ಪಾಲ್ಗೊಳ್ಳುವರು. ಮೈತ್ರಿ ಮಹಿಳಾ ನೃತ್ಯ ತಂಡದ ಇಂದ್ರಮ್ಮ ಹಾಗೂ ಸಂಗಡಿಗರಿಂದ ನೃತ್ಯ ವೈಭವ ಜರುಗಲಿದೆ. ಶಂಕರ ಚೊಂಡಿ ಹಾಗೂ ಅಂಗಡಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಶಂಕರ ಹಲಗತ್ತಿ ತಿಳಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧೀಕ್ಷಕ ಎನ್.ಎಸ್.ಕಾಶಪ್ಪನವರ್, ಸದಸ್ಯರಾದ ಮಹೇಶ ಗೋರಳನಾಳಕರ್, ಶಾಮರಾವ ನೆಲವಾಡೆ, ಸಂಜೀವಕುಮಾರ ಮೇತ್ರೆ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.