ಪುನರ್ ವಸತಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಎಂ.ವೈ ಒಂದೇ ದಿನದಲ್ಲಿ ನಾಲ್ಕು ಹೊಸ ಕಟ್ಟಡಗಳು ಸಾರ್ವಜನಿಕ ಸೇವೆಗೆ ಲೋಕಾರ್ಪಣೆ
ಅಫಜಲಪುರ:ಮಾ.15: ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತದ ವತಿಯಿಂದ ಗ್ರಾಮೀಣ ಭಾಗದ ಜನರಿಗೆ 94(ಸಿ) ಅಡಿಯಲ್ಲಿ ಹಾಗೂ ಕೆ.ಎನ್.ಎಲ್.ಎಲ್ ವತಿಯಿಂದ ಅಳ್ಳಗಿ (ಬಿ) ಹಾಗೂ ಇತರೆ ಗ್ರಾಮದ ಪುನರ್ ವಸತಿ ಕೇಂದ್ರದ ಫಲಾನುಭವಿಗಳು ಹಾಗೂ ಜಮೀನಿನಲ್ಲಿ ಅಧಿಕೃತವಾಗಿ ವಾಸದ ಮನೆ ನಿರ್ಮಿಸಿದ ವಾರಸುದಾರರ ಮನೆಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಧಿನಿಯಮ 94(ಸಿ) ರ ಅನ್ವಯ ವಾಸದ ಮನೆ ಸಕ್ರಮಗೊಳಿಸಿದ ಸುಮಾರು 454 ಹಕ್ಕುಪತ್ರಗಳನ್ನು ಶಾಸಕ ಎಂ.ವೈ ಪಾಟೀಲ ವಿತರಿಸಿ ಮಾತನಾಡಿದರು.
ಭೀಮಾ ಏತ ನೀರಾವರಿ ಯೋಜನೆಯ ಹಿನ್ನೀರಿನಿಂದ ಬಾಧಿತಗೊಂಡ ಅಳ್ಳಗಿ (ಬಿ) ಗ್ರಾಮದ ಗ್ರಾಮಸ್ಥರಿಗೆ ನೀಡಿದ ನಿವೇಶನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಮುಂಬರುವ ದಿನಗಳಲ್ಲಿ ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ನಡೆಸಿ ಸೂರು ಇಲ್ಲದವರಿಗೆ ನೆಲೆ ಕಲ್ಪಿಸುವ ಮೂಲಕ ಅರ್ಹ ಫಲಾನುಭವಿಗಳ ನೆರವಿಗೆ ನಮ್ಮ ಸರಕಾರ ಮುಂದೆ ಬರಲಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರ ಪ್ರಯೋಜನ ಪಡೆದ ಅರ್ಹ ಫಲಾನುಭವಿಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದ ಬಡವರು ಸಬಲರಾಗಲು ಪ್ರಯೋಜನವಾಗಿದೆ ಎಂದರು.
ತಹಸೀಲ್ದಾರ್ ಸಂಜೀವಕುಮಾರ ದಾಸರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೆ.ಎನ ಎನ ಎಲ್ ಎಇಇ ಸಂತೋಷ ಸಜ್ಜನ್, ಲೋಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮೀಕಾಂತ ಬಿರಾದಾರ, ಗ್ರೇಡ್-2 ತಹಸೀಲ್ದಾರ ಶರಣಬಸಪ್ಪ ಹೊಸಮನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ ನಾನಾಗೌಡ ಪಾಟೀಲ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ಫಲಾನುಭವಿಗಳು ಹಾಜರಿದ್ದರು.
ನಂತರ ಅಫಜಲಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಪಶು ಆಸ್ಪತ್ರೆ, ಗ್ರಂಥಾಲಯ, ಜೆಸ್ಕಾಂ ಇಲಾಖೆಯ ಕಚೇರಿ ಉದ್ಘಾಟನೆ ಹಾಗೂ ಮಲ್ಲಾಬಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೋಣೆಗಳನ್ನು ಶಾಸಕ ಎಂ. ವೈ ಪಾಟೀಲ್ ಉದ್ಘಾಟಿಸಿದರು.