ಖಾಲಿ ಗಾಡಾ ಓಡಿಸುವ ಸ್ಪರ್ಧೆ
ಲಕ್ಷ್ಮೇಶ್ವರ,ಮಾ15-: ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಗುರುವಾರ ರಾಜ್ಯಮಟ್ಟದ ಖಾಲಿ ಗಾಢಾ ಓಡಿಸುವ ಸ್ಪರ್ಧೆಯನ್ನು ವೀರ ಸಿಂಧೂರ ಲಕ್ಷ್ಮಣ ಯುವಕ ಮಂಡಲದ ವತಿಯಿಂದ ಸಂಘಟಿಸಲಾಗಿತ್ತು.
ಸ್ಪರ್ಧೆಗೆ ಶಿರಹಟ್ಟಿ ಮಂಡಲದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸುನಿಲ ಮಹಾಂತ ಶೆಟ್ಟರ್ ಚಾಲನೆ ನೀಡಿ ಮಾತನಾಡಿ, ರೈತರ ಜೀವನಾಡಿಯಾದ ಎತ್ತುಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಈ ಕ್ರೀಡೆ ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿದ್ದು ಸರ್ಕಾರ ಇದನ್ನು ಅಧಿಕೃತವಾಗಿ ರೈತರ ಕ್ರೀಡೆ ಎಂದು ಪರಿಗಣಿಸಬೇಕು ಎಂದು ಹೇಳಿದರು. ರೈತರು ವರ್ಷದುದ್ದಕ್ಕೂ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ ಈಗ ಸ್ವಲ್ಪ ಮಟ್ಟಿನ ಬಿಡುವು ದೊರಕುವದರಿಂದ ರೈತರು ತಮ್ಮ ಬದುಕಿನೊಂದಿಗೆ ಕುಟುಂಬದ ಸದಸ್ಯರಂತೆ ಬೆಳೆಸಿ ಮೇಯಿಸಿ ಅವುಗಳನ್ನು ಅಕ್ಕರೆಯಿಂದ ಪೆÇೀಷಣೆ ಮಾಡಿರುವ ರೈತರ ಎತ್ತುಗಳಿಗೆ ತಮ್ಮ ಸಾಮರ್ಥ್ಯ ಮತ್ತು ಶಕ್ತಿಯನ್ನು ತೋರಿಸುವ ಕ್ರೀಡೆ ಈಗ ಜನಜನಿತವಾಗಿದ್ದು ಸರ್ಕಾರ ಇದನ್ನು ದಕ್ಷಿಣ ಕನ್ನಡದಲ್ಲಿ ಕಂಬಳ ಹೇಗೆ ಅಧಿಕೃತವೋ ಅದೇ ರೀತಿ ಉತ್ತರ ಕರ್ನಾಟಕದ ಈ ಕ್ರೀಡೆಗೆ ಪೆÇ್ರೀತ್ಸಾಹ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಭೀಮಣ್ಣ ಯಂಗಾಡಿ ಶಕ್ತಿ ಕತ್ತಿ ಸಂತೋಷ ಜಾವೂರ್ ವಿಶಾಲ ಬಟಗುರ್ಕಿ ವಿಜಯ ಕುಂಬಾರ ಪ್ರವೀಣ್ ಬೊಮ್ಲೆ ನಿಂಗಪ್ಪ ಬನ್ನಿ ಹನುಮಂತ್ ಜಾಲಿ ಮರದ ಸೇರಿದಂತೆ ಯುವಕ ಮಂಡಳದ ಪದಾಧಿಕಾರಿಗಳು ಇದ್ದರು.