ನೈರುತ್ಯ ರೈಲು ಚಾಲನೆ: ಅಧಿಕಾರಾವಧಿಯಲ್ಲಿನ ಕೆಲಸಗಳು ಶಾಶ್ವತ
(ಸಂಜೆವಾಣಿ ವಾರ್ತೆ)
ಸಿಂಧನೂರು ಮಾ.೧೫ ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಅಧಿಕಾರದ ನಂತರ ದಲ್ಲಿ ಶಾಶ್ವತ ವಾಗಿ ಜನಮಾನಸದಲ್ಲಿ ಉಳಿಯತ್ತವೆ. ಅಧಿಕಾರ ಶಾಶ್ವತವಲ್ಲ ಜನ ಸೇವೆ ಶಾಶ್ವತ ಎಂದು ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಹೇಳಿದರು.
ನೈಋತ್ಯ ರೈಲ್ವೆಗೆ ಚಾಲನೆ ನೀಡಿ ,ಕಾರ್ಯಕ್ರಮದ ಉದ್ಘಾಟನೆ ಮಾತನಾಡುತ್ತಾ ಯಶವಂತಪುರ – ಕಾರಟಗಿ ರೈಲು ಎಕ್ಸ್‌ಪ್ರೆಸ್(೧೬೫೪೫)ಗೆ ೩,೨೬೦ ಕೋಟಿ ರೂ ಅನುದಾನ ಇಡಲಾಗಿದ್ದು ,ಅದರಲ್ಲಿ ೧,೯೯೧ ಕೋಟಿ ರೂ ಖರ್ಚಾಗಿದ್ದು ಇನ್ನೂ ರಾಯಚೂರು ಗೆ ಈ ರೈಲು ಲೈನ್ ತಲುಪಬೇಕಾಗಿದೆ.ನಮ್ಮ ಭಾಗದಲ್ಲಿ ಒಟ್ಟು ೧೪ ರೈಲು ಕ್ರಾಸಿಂಗ್ ಹಳಿಗಳು (ರಸ್ತೆ ಮೇಲೆ ,ಅಂಡರ್ ಪಾಸ್) ಇವೆ.ಇದಕ್ಕೆ ಪ್ರಧಾನಿ ಮೋದಿಯವರ ದೂರದೃಷ್ಟಿ ಕಾರಣ .ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರಗಳಲ್ಲಿ ಸಿಂಧನೂರು, ಮಸ್ಕಿ ಸೇರುತ್ತವೆಂದರು . ಶಾಸಕ ಹಂಪನಗೌಡ ಬಾದರ್ಲಿ ಯವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಂತಿ ಮಾಡಿಸಿ ಸಿಂಧನೂರುಗೆ ಮೆಡಿಕಲ್ ಕಾಲೇಜು ತೆಗೆದುಕೊಂಡು ಬನ್ನಿ ಜನ ನಿಮ್ಮ ಭಾವಚಿತ್ರ ಹಾಕುತ್ತಾರೆಂದರು ಮನವರಿಕೆ ಮಾಡಿದರು.ಬೈ ಪಾಸ್ ಆಗಬೇಕಾಗಿದೆ ,ಕೇಂದ್ರೀಯ ವಿದ್ಯಾಲಯ ತರಬೇಕಾಗಿದೆ.ಪೋಸ್ಟಲ್ ಅಧಿಕಾರಿಗಳು ನನಗೆ ಎತ್ತಿಕೊಂಡಿ ಕುಣಿದಾಡಿದರು ಆಗ ನನಗೆ ಸಂತೃಪ್ತಿಯಾಯಿತು.ಯಲಬುರ್ಗಾ ,ಕುಕುನೂರುಗೆ ಎರಡು ಬೈಪಾಸ್ ಮಂಜೂರು ಆಗಿವೆ. ಏಳು ವರ್ಷದಲ್ಲಿ ಗದಗವಾಡಿ ರೈಲು ಓಡಲು ಪ್ರಾರಂಭಾಗಿದೆ ಇದು ದೊಡ್ಡ ಇತಿಹಾಸವೇ ಸರಿ ಎಂದರು.ಜಗತ್ತಿನ ೧೪ ಬಲಿಷ್ಠ ರಾಷ್ಟ್ರಗಳು ಮೋದಿಯವರನ್ನು ಜಾಗತಿಕ ನಾಯಕನಾಗುವಂತೆ ಆಹ್ವಾನ ನೀಡುತ್ತಿದ್ದಾರೆ ಇದು ನಮ್ಮ ಶಕ್ತಿ ಎಂದರು.ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ನವರ ಮಾಡಿದ ಟೀಕೆಗಳು ನನಗೆ ಆಶಿರ್ವಾದ ಇದ್ದಂತೆ ಅದರ ಬಗ್ಗೆ ಟೀಕೆ ಮಾಡಲ್ಲ ಮತ್ತು ಮಂಡಲ ಅದ್ಯಕ್ಷರು ಗಳ ಪದಗ್ರಹಣ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ ನಾ ಹೇಗೆ ಬರಲಿ ಎಂದರು.
ರೌಡಕುಂದಾ ಮಠದ ಸದಾನಂದ ಶರಣರು ಮಾತನಾಡಿ ಈ ರೈಲಿಗೆ ನಮ್ಮ ಭಾಗದ ಅಧಿ ದೇವತೆ ಶ್ರೀ ಅಂಬಾದೇವಿ ಹೆಸರನ್ನು ಇಡಬೇಕೇಂದು ವಿಶ್ವ ಹಿಂದು ಪರಿಷತ್ತು ಹಾಗೂ ನಮ್ಮ ಭಾಗದ ವತಿಯಿಂದ ಒತ್ತಾಯ ಮಾಡುತ್ತಿದ್ದೆವೆ ಹಾಗೂ ಜನರ ಆಶೋತ್ತರಗಳನ್ನು ಈಡೆರಿಸುವವರೆ ನಿಜವಾದ ಜನ ನಾಯಕ ಅಂತಹವರ ಸಾಲಿನಲ್ಲಿ ಪ್ರಧಾನಿ ಮೋದಿ ನಿಲ್ಲುತ್ತಾರೆ.’ನಾವೆಲ್ಲಾ ಒಂದು ವಿಶ್ವವೇ ಬಂಧು ’ ಎಂದು ಆಶಿರ್ವಚನ ನೀಡಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಸಿಂಧನೂರು ಭಾಗಕ್ಕೆ ಬೇಕು ಎಂದು ಅಂದೆ ಪ್ರಧಾನಿ ದೇವೆಗೌಡರಿಗೆ ವಿನಂತಿ ಮಾಡಲಾಗಿತ್ತು .ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ ,ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಸೇರಿದಂತೆ ಹಲವರ ಶ್ರಮ ಇದೆ ನಂತರ ಭೂಮಿ ವಶಿಕರಣ ಮಾಡಿಸುವ ಸಲುವಾಗಿ ತಡವಾಗಿತ್ತು ನಂತರ ಸಂಸದ ಸಂಗಣ್ಣ ಅವರಿಂದ ಇಂದು ಸಿಂಧನೂರಿಗೆ ರೈಲು ಬಂದಿದೆ.೨೦೨೬ ರಲ್ಲಿ ಸಿಂಧನೂರು ದಿಂದ ರಾಯಚೂರು ಗೆ ರೈಲು ತಲುಪುತ್ತದೆಂಬ ಮಾಹಿತಿ ಅಧಿಕಾರಿಗಳು ನೀಡಿದ್ದಾರೆ. ರೈಲು ಬೆಂಗಳೂರಿಗೆ ತಲುಪಲು ಸುತ್ತುವರೆದು ತುಂಬಾ ಸಮಯ ತೆಗೆದುಕೊಳ್ಳುತ್ತದೆಂದು ಅದನ?ನು ಮಾರ್ಗ ಬದಲಾವಣೆ ಮಾಡಿ ಹುಬ್ಬಳ್ಳಿ ವಲಯಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಮಾಜಿ ಶಾಸಕ ಪ್ರತಾಪ ಪಾಟೀಲ್ ಮಾತನಾಡಿ ಸಂಸದ ಸಂಗಣ್ಣ ಕರಡಿ ಯವರ ಶ್ರಮ ಅರ್ದ ಆದರೆ ಇನ್ನುಳಿದ ಅರ್ಧದಷ್ಟು ಮಾಜಿ ಜನಪ್ರತಿನಿಧಿಗಳ ಶ್ರಮ ಇದೆ . ರೈಲು ನಿಲ್ದಾಣ ,ವಿಮಾನ ನಿಲ್ದಾಣ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಕೆಲಸ ಪ್ರಧಾನಿ ಮೋದಿಯವರಿಂದಾಗಿದೆ ಅದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಬಸವರಾಜ ನಾಡಗೌಡ ,ರಾಜೇಶ ಹಿರೇಮಠ , ಅಮರೇಗೌಡ ವಿರುಪಾಪುರ ,ಮಧ್ವ ರಾಜ ಆಚಾರ್ಯ ,ನಿರುಪಾದೆಪ್ಪ ಜೋಳದರಾಶಿ, ಯಂಕೋಬ ನಾಯಕ ,ಹನುಮೇಶ ಸಾಲಗುಂದಾ ,ಮಲ್ಲಿಕಾರ್ಜುನ ಜಿನೂರು , ಹುಬ್ಬಳ್ಳಿ ವಿಭಾಗಾಧಿಕಾರಿ ದೇವಯಾನಿ,ಎಇಇ ಉಮಾಮಹೇಶ್ವರ ,ಭೂ ವಿಸ್ತಿರ್ಣಾಧಿಕಾರಿ ಶೃತಿ ಉಪಸ್ಥಿತರಿದ್ದರು.