ಕರಡಿಗೆ ತಪ್ಪಿದ ಟಿಕೇಟ್: ಕಾಂಗ್ರೆಸ್ ಕದ ತಟ್ಟುತ್ತಾರಾ ಸಂಗಣ್ಣ?
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೧೫- ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಟಿಕೇಟ್ ತಪ್ಪಿದ್ದರಿಂದ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಕದ ತಟ್ಟುತ್ತಾರೆಂಬ ಗುಮಾನಿಗಳು ಜೋರಾಗಿ ಎದ್ದಿವೆ.
ಸಂಗಣ್ಣ ಕರಡಿಯವರು ಎರಡು ಅವಧಿಯಲ್ಲಿ ಸಂಸದರಾಗಿ ಅಧಿಕಾರದ ಗದ್ದುಗೆ ಹಿಡಿದು ಜನರಿಗೆ ಅವರ ಕೊಡುಗೆ ಏನು ಇಲ್ಲ ಎಂಬ ಧ್ವನಿ ಕ್ಷೇತ್ರದಾದ್ಯಂತ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ವೆ ಆಧರಿಸಿ ಟಿಕೇಟ್ ತಪ್ಪಿದೆ ಎನ್ನುತ್ತಾರೆ. ಕಳೆದ ಬಾರಿ ತನ್ನ ಸೊಸೆಗೆ ಟಿಕೇಟ್ ವಿಷಯವಾಗಿ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಡಲು ಹೋಗಿದ್ದರು ಆಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮನವೊಲಿಸಿ ಪಕ್ಷದಲ್ಲಿ ಉಳಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ದೇಹ ಬಿಜೆಪಿಯಲ್ಲಿ, ಮನಸ್ಸು ಕಾಂಗ್ರೆಸ್ ನಲ್ಲಿದೆ : ಸಂಗಣ್ಣ ಕರಡಿಯವರ ದೇಹ ಬಿಜೆಪಿ ಯಲ್ಲಿದೆ ಮನಸ್ಸೆಲ್ಲಾ ಕಾಂಗ್ರೆಸ್ ನಲ್ಲಿದೆ ಎಂಬ ಆರೋಪಗಳು ಆಗಿನಿಂದಲೂ ಅವರ ಮೇಲೆ ಇವೆ. ಕಾಂಗ್ರೆಸ್ ಸೇರ್ಪಡೆ ಯಾದರೆ ಅದು ಈಗ ನಿಜವಾದಂತಾಗುತ್ತದೆ .
ಹುನಗುಂದ ವಿಜಯಾನಂದ ಕಾಶಪ್ಪನವರು ಡಿಕೆಶಿ ಯವರನ್ನು ಬೇಟಿ ಮಾಡಿಸಿ ಸಂಗಣ್ಣನವರನ್ನುಕಾಂಗ್ರೇಸ್ ಪಕ್ಷಕ್ಕೆ ಕರೆ ತರಲು ಎಲ್ಲಾ ಪ್ರಯತ್ನ ನಡೆದಿವೆನ್ನುತ್ತಾರೆ.
ಪಕ್ಷಕ್ಕೆ ಯಾವುದೇ ನಷ್ಟ ಇಲ್ಲ: ಸಂಗಣ್ಣನವರಿಗೆ ಟಿಕೇಟ್ ತಪ್ಪಿದ್ದಕ್ಕೆ ಬಿಜೆಪಿ ಪಕ್ಷಕ್ಕೆ ಯಾವುದೇ ನಷ್ಟ ಇಲ್ಲ ಕಾರಣ ಟಿಕೇಟ್ ದಕ್ಕಿಸಿಕೊಂಡ ಡಾ ಬಸವರಾಜ ಕೂಡ ಅದೆ ಪಂಚಮಸಾಲಿ ಸಮುದಾಯದವರು. ಕಳೆದ ಬಾರಿ ಕೊಡಬೇಕಾಗಿದ್ದ ಟಿಕೇಟ್ ಈ ಬಾರಿ ವೈದ್ಯರ ಪಾಲಾಗಿದೆ ಅಷ್ಟೇ.
ಹಿಟ್ಟಾಳ ಡಾ.ಬಸವರಾಜ: ಲೋಕಸಭಾ ಚುನಾವಣಾ ಕೊಪ್ಪಳ ಸ್ಪರ್ಧೆ ನೇರ ನೇರ ಹಿಟ್ನಾಳ – ಡಾ.ಬಸವರಾಜ ಮದ್ಯ ತುಂಬ ಏರ್ಪಟ್ಟಿದ್ದು, ಮತದಾರರ ಮೇಲೆ ಸಿದ್ದರಾಮಯ್ಯ ನೀಡಿದ ರಾಜ್ಯದ ಸರ್ಕಾರದ ಗ್ಯಾರಂಟಿ ಗಳು ಪರಿಣಾಮ ಬೀರುತ್ತಾವೋ ಅಥವಾ ಮೋದಿ ಮೇನಿಯಾ ಕೆಲಸ ಮಾಡುತ್ತೆ ಎಂಬುವುದು ಕಾದುನೋಡಬೇಕಾಗಿದೆ. ಬಿಸಿಲಿನ ಕಾವಿನಂತೆ ಇನ್ನೂ ಎಲ್ಲೆಡೆ ಲೋಕಸಭೆ ಚುನಾವಣೆಯದ್ದೆ ಚರ್ಚೆ ನಡೆಯುತ್ತದೆ.