ಜಿಲ್ಲೆಯಲ್ಲಿ ಕ್ಯಾನ್ಸರ್ ಹೊರರೋಗಿ ಕೇಂದ್ರ ಸ್ಥಾಪನೆ
(ಸಂಜೆವಾಣಿ ವಾರ್ತೆ)
ರಾಯಚೂರು, ಮಾ.೧೫- ಪ್ರತಿಷ್ಠಿತ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೆಸರುವಾಸಿಯಾದ ಹೆಚ್ ಸಿಜಿ ಕಲ್ಬುರ್ಗಿ ಮತ್ತು ನವೋದಯ ಮೆಡಿಕಲ್ ಕಾಲೇಜು ಹಾಗೂ ಸಂಶೋಧನ ಕೇಂದ್ರ ಸಹಭಾಗಿತ್ವದಲ್ಲಿ
ನಗರದ ನವೋದಯ ಮೆಡಿಕಲ್ ಕಾಲೇಜು ಆವರಣದಲ್ಲಿ ಕ್ಯಾನ್ಸರ್ ಹೊರರೋಗಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ನವೋದಯ ಡೀನ್ ಡಾ.ಬಿ ದೇವಾನಂದ ಅವರು ಹೇಳಿದರು.
ಅವರಿಂದು ನಗರದ ನವೋದಯ ಮೆಡಿಕಲ್ ಕಾಲೇಜು ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವೈದ್ಯಕೀಯ ಸಮೀಕ್ಷೆ ಪ್ರಕಾರ
ಕಲ್ಯಾಣ ಕರ್ನಾಟಕ ಭಾಗದ ಮತ್ತು ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಹುತೇಕ ಜನರು ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆ ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಉತ್ತಮ ಸೌಲಭ್ಯ ನೀಡುವುದರ ಮೂಲಕ ಕ್ಯಾನ್ಸರ್ ಮುಕ್ತ ಜಿಲ್ಲೆಯ ಗುರಿ ಹೊಂದಲಾಗಿದೆ ಎಂದರು. ಕ್ಯಾನ್ಸರ್ ಹೊರರೋಗಿ ಕೇಂದ್ರ ಸ್ಥಾಪನೆ ಇಲ್ಲಿನ ಜನರಿಗೆ ಅತ್ಯಂತ ಪ್ರಯೋಜನಕಾರವಾಗಲಿದೆ ಎಂದರು.
ರೋಗ ತಪಾಸಣೆ ಮಾಡಿಕೊಳ್ಳಲು ಜನರು ಬೆಂಗಳೂರು, ಹೈದ್ರಾಬಾದ್ ಮತ್ತು ಹೊರ ಪ್ರದೇಶಗಳಿಗೆ ತೆರಳುವ ಅನಿವಾರ್ಯ ಇದೆ. ಈ ಹಿನ್ನಲೆ ರೋಗಿಗಳು ಹೊರ ಪ್ರದೇಶಗಳಿಗೆ ಹೋಗದಂತೆ ಗುಣಮಟ್ಟದ ಚಿಕೆತ್ಸೆಯೊಂದಿಗೆ ರೋಗಿಗಳ ತೊಂದರೆ ಆಗದೇ ಇರುವ ನಿಟ್ಟಿನಲ್ಲಿ ಕ್ಯಾನ್ಸರ್ ಸಂಪೂರ್ಣ ಗುಣಪಡಿಸುವ ಚಿಕೆತ್ಸೆ ನೀಡಲಾಗುವುದು ಎಂದರು.
ಪ್ರತಿ ತಿಂಗಳು ಎರಡನೆ ಶನಿವಾರ ಮತ್ತು ನಾಲ್ಕನೆ ಶನಿವಾರ ರಂದು ನವೋದಯ ಅವರಣದಲ್ಲಿ ಹೊರ ರೋಗಿಗಳ ತಪಾಸಣೆ ಮಾಡಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರನ್ನು ಮೊದಲು ಗುರುತಿಸಿ ಅವರಿಗೆ ಕೈಗೆಟುಕುವ ರಿಯಾಯತಿ ದರದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಉತ್ತಮವಾದ ವೈದ್ಯಕೀಯ ಸೌಲಭ್ಯ ನೀಡಲು ಉದ್ದೇಶವಿರುತ್ತದೆ. ಮತ್ತು ಕ್ಯಾನ್ಸರ್ ರೋಗಿಗಳಿಗೆ ಅವಶ್ಯಕತೆ ಇರುವ ಶಸ್ತ್ರ ಚಿಕಿತ್ಸೆ, ರೇಡಿಯೇಷನ್,ಕಿಮೊಥೆರಿಫಿಗಳನ್ನು ಕೊಡ ಹತ್ತಿರದಲ್ಲಿರುವಂತ ಕಲಬುರಗಿ ಹೆಚ್ ಸಿ ಜಿ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ರೋಗಿಗಳಿಗೆ ಸೇವೆ ಮಾಡಲು ಮುಂದಾಗಿರುತ್ತದೆ.
ಬಿಪಿ ಎಲ್ ಕಾರ್ಡ ರೋಗಿಗಳು ಮತ್ತು ಎಪಿಎಲ್ ಕಾರ್ಡ ಹೊಂದಿರುವ ಬಡ ರೋಗಿಗಳು ಇದರ ಪ್ರಯೋಜನ ಪಡೆಯಬಹುದೆಂದು ಎಂದರು.
ಈ ಸಂದರ್ಭದಲ್ಲಿ ಡಾ.ಅರುಣ್,ಡಾ. ಮಲ್ಲಿಕಾರ್ಜುನ, ದಿಲೀಪ್,ಡಾ. ಶಾಂತಲಿಂಗ ಸೇರಿದಂತೆ ಉಪಸ್ಥಿತರಿದ್ದರು.