ಮಕ್ಕಳ ಪಾಲನೆ, ರಕ್ಷಣೆ ಅದಿಕಾರಿಗಳಿಗೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ
ಆನೇಕಲ್. ಮಾ. ೧೫ – ಚಂದಾಪುರದಲ್ಲಿ ಮಕ್ಕಳ ರಕ್ಷಣಾ ನಿರ್ದೆಶನಾಲಯ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ಹಾಗೂ ಯಶಸ್ವಿನಿ ಮಹಿಳಾ ಮಂಡಳಿ ಒಕ್ಕೂಟ ಸೇವಾ ಶ್ರಮದ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳ ಪಾಲನೆ ಮತ್ತು ರಕ್ಷಣೆ ಕುರಿತು ಅದಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇಓ ಮಂಜುನಾಥ್ ರೆಡ್ಡಿ, ಯಶಸ್ವಿನಿ ಮಹಿಳಾ ಮಂಡಳಿ ಒಕ್ಕೂಟ ಸೇವಾ ಶ್ರಮದ ಅಧ್ಯಕ್ಷೆ ಅಶ್ವಥಮ್ಮ ನಾರಾಯಣರೆಡ್ಡಿ, ಕಾರ್ಯದರ್ಶಿ ಮಂಜುಳ ವೆಂಕಟೇಶ್. ರಾಷ್ಠೀಯ ಯುವ ಪ್ರಶಸ್ಥಿ ಪುರಸ್ಕೃತರಾದ ಹೀಲಲಿಗೆ ನಾಗವೇಣಿ, ಮಕ್ಕಳ ರಕ್ಷಣಾ ನಿರ್ದೆಶನಾಲಯದ ಅದಿಕಾರಿಗಳಾದ ಆಶಾ, ತರಬೇತುದಾರರಾದ ರಾಘವೇಂದ್ರ ಭಟ್, ವೈದ್ಯರು ಹಾಗೂ ಅದಿಕಾರಿಗಳು ಬಾಗವಹಿಸಿದ್ದರು.