ಬರೆದಂತೆ ಬದುಕಿದ ರಾಷ್ಟ್ರಕವಿ ಡಾ.ಜಿಎಸ್‍ಎಸ್
ಸಂಜೆವಾಣಿ ನ್ಯೂಸ್
ಮೈಸೂರು: ಮಾ.15:- ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರದು ಜೀವನಕ್ಕೆ ಹೊರತದ ಸಾಹಿತ್ಯವಲ್ಲ, ಜೀವನವನ್ನು ಒಳಗೊಂಡ ಸಾಹಿತ್ಯ ಎಂದು ದೀನ ಬಂಧು ಮಕ್ಕಳ ಮನೆಯ ಸಂಸ್ಥಾಪಕರೂ ಆದ ಜಿಎಸ್‍ಎಸ್ ಪುತ್ರ ಡಾ.ಜಿ.ಎಸ್.ಜಯದೇವ ಹೇಳಿದರು.
ನಗರದ ನಟರಾಜ ಕಾಲೇಜಿನ ಸಭಾ ಭವನದಲ್ಲಿ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಸಂವಾದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಜಿಎಸ್‍ಎಸ್ ಅವರ ಬದುಕು ಸಾಹಿತ್ಯ ಜೀವನಗಾಥೆಯನ್ನು ಬಿಚ್ಚಿಟ್ಟರು.
ಜಿಎಸ್‍ಎಸ್ ಅವರು ಬದುಕಿನ ಕೊನೆಯ ದಿನಗಳವರೆಗೂ ಓದಿನಲ್ಲಿ ತಲ್ಲೀನರಾಗಿದ್ದರು. ಪುಸ್ತಕಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಬೆಳಿಗ್ಗೆ ಸಂದರ್ಭದಲ್ಲಿ ಕೋಣೆಯ ಬಾಗಿಲನ್ನು ಹಾಕಿ ತಮ್ಮ ಬರವಣಿಗೆಯಲ್ಲಿ ಮಗ್ನರಾಗುತ್ತಿದ್ದರು. ಜಿಎಸ್‍ಎಸ್ ಅವರ ಸಾಹಿತ್ಯ ಮತ್ತು ಜೀವನ ಒಂದೆಯಾಗಿತ್ತು ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಪ್ರಭಾವಕ್ಕೆ ಜಿಎಸ್‍ಎಸ್ ಒಳಗಾಗಿದ್ದರು. ಪ್ರಭಾವಕ್ಕೆ ಒಳಗಾದಷ್ಟು ಅವರದೇ ಬರವಣಿಗೆ ಶೈಲಿಯಲ್ಲಿ ಬರೆಯುತೀರಾ. ಹೀಗಾಗಿ ಕುವೆಂಪು ಪ್ರಭಾವದಿಂದ ಹೊರ ಬನ್ನಿ ಎಂದು ಸ್ನೇಹಿತರಾದ ಕವಿ ಚೆನ್ನಾವೀರ ಕಣವಿ, ಜಿಎಸ್‍ಎಸ್‍ಗೆ ಸಲಹೆ ನೀಡಿದ್ದರು. ಆದರೆ, ಕುವೆಂಪು ಪ್ರಭಾವದಿಂದ ಹೊರ ಬರಲು ಬಹಳ ಕಷ್ಟ ಪಟ್ಟರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಡುಗೆ ಮಾಡುವರು, ಹಬ್ಬದಲ್ಲಿ ಹೋಳಿಗೆ ಮಾಡುವರು. ವಿದ್ಯಾರ್ಥಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಹೆಸರು, ಕೀರ್ತಿ, ಪ್ರಶಸ್ತಿಗಳಿಗೆ ಅವರೆಂದು ಬೆಲೆ ಕೊಡಲಿಲ್ಲ. ವೌಲ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಹೀಗಾಗಿ ಸ್ವಜನ-ಸ್ವಜಾತಿಯ ವ್ಯಾಮೋಹ ಇರಲಿಲ್ಲ. ಧರ್ಮ ಮುಕ್ತವಾಗಿ ನನ್ನ ಸಂಸ್ಕಾರ ಮಾಡಬೇಕು ಎಂದ ನನಗೆ ಹೇಳಿದ್ದರು.
ಅದರಂತೆ ಸಾಹಿತಿಕ ವಿದಾಯವೆಂದು ಪಂಪ, ರನ್ನ, ಕುವೆಂಪು ಸೇರಿದಂತೆ ಇತರೆ ಕವಿಗಳ ಉದಾತ ಸಾಲುಗಳನ್ನು ಗಮಕ ಮಾಡಿಸಿ ಬೀಳ್ಕೊಡುಗೆ ನೀಡಲಾಯಿತು. ಅಂತ್ಯ ಸಂಸ್ಕಾರವನ್ನು ಬಹಳ ದೊಡ್ಡದಾಗಿ ನಡೆಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೀನ ಬಂಧು ಸಂಸ್ಥೆಯು ಶಿಕಾರಿಪುರದಲ್ಲಿ ಶುರುವಾಗಿದ್ದು, ನಮ್ಮ ಸಂಸ್ಥೆಯಲ್ಲಿ 50 ಮಂದಿ ಕೆಲಸ ಮಾಡುತ್ತಿದ್ದಾರೆ. 200 ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ರೂಪುರೇಷೆ ಸಿದ್ದಪಡಿಸಲಾಗಿದೆ. ಇದಕ್ಕಾಗಿ ಶಿಕ್ಷಕರನ್ನು ತರಬೇತಿ ನೀಡಲಾಗುತ್ತಿದೆ. ಹಣಕ್ಕೆ ಕೊರತೆಯಿಲ್ಲ. ಅಂತಃಕರಣದ ಮತ್ತು ಮನುಷ್ಯತ್ವ ಕೊರತೆಯಿದೆ ಎಂದು ದೀನಬಂಧು ಸಂಸ್ಥೆಯ ಕುರಿತು ವಿವರಿಸಿದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಕಾರಿ ಪೆÇ್ರ.ಎಸ್.ಶಿವರಾಜಪ್ಪ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದಾ, ಉಪ ಪ್ರಾಂಶುಪಾಲ ಪ್ರಸಾದ್ ಇನ್ನಿತರು ಕಾರ್ಯಕ್ರಮದಲ್ಲಿ ಹಾಜರಿದ್ದರು.