ಶಾಸಕರು ಸಾರ್ವಜನಿಕರ ಜೊತೆಗೆ ನಿಲ್ಲಬೇಕು
ಸಂಜೆವಾಣಿ ವಾರ್ತೆ
ಸಾಲಿಗ್ರಾಮ:ಮಾ.15:-ಮುಖ್ಯಮಂತ್ರಿಗಳ ಹಿಂದೆ ನಿಂತು ಫೆÇೀಸ್ ಕೊಡುವ ಬದಲು ಕೃಷ್ಣ ರಾಜ ನಗರ ವಿಧಾನಸಭಾ ಕ್ಷೇತ್ರವು ಬರದಿಂದ ತತ್ತರಿಸುತ್ತಿರುವಾಗ ಕ್ಷೇತ್ರದ ರೈತರ ಸಾರ್ವಜನಿಕರ ಜೊತೆಗೆ ನಿಲ್ಲಬೇಕು ಎಂದು ( ಶಾಸಕ ಡಿ ರವಿಶಂಕರ್ ಅವರಿಗೆ) ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು. ಅವರು ಸಾಲಿಗ್ರಾಮ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಿಕಟಪೂರ್ವ ಶಾಸಕರಾದ ಸಾರಾ ಮಹೇಶ್ ಅವರು 2023ರ ಮುಖ್ಯಮಂತ್ರಿ ಆಗಿದ್ದ ಬಸವರಾಜು ಬೊಮ್ಮಾಯಿ ಅವರಿಂದ ವಿಶೇಷ 10 ಕೋಟಿ ಅನುದಾನವನ್ನು ಇಂದಿನ ಶಾಸಕರು (ಡಿ ರವಿಶಂಕರ್) ತಮ್ಮಗೆ ಇಚ್ಚೆ ಬಂದಂತಹ ಗ್ರಾಮಗಳಿಗೆ ಕಾಮಗಾರಿ ಬದಲಾವಣೆ ಮಾಡಿದ್ದು ಅವರ ಘನತೆಗೆ ಸರಿಯಲ್ಲ ಅವಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಹತ್ತರಿಂದ ಇಪ್ಪತ್ತೈದು ಲಕ್ಷದ ವರೆಗೆ ಕಾಮಗಾರಿ ಬದಲಾವಣೆ ಮಾಡಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು ಸಾರಾ ಮಹೇಶ್ ಅವರು ತಂದಂತಹ ಅನುದಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದವು ಅದನ್ನೇ ನೀವು ಬದಲಾವಣೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರು.
ಸಾರಾ ಮಹೇಶ್ ನೇತೃತ್ವ: ಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿ ಜೆಡಿಎಸ್ ಪಕ್ಷಕ್ಕೆ ಸಿಗಲಿದ್ದು ಸಾರಾ ಮಹೇಶ್ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ ಹಾಗೂ ಕೆಆರ್ ನಗರ ವಿಧಾನಸಭಾ ಕ್ಷೇತ್ರದಲ್ಲೇ ಮೈತ್ರಿ ಅಭ್ಯರ್ಥಿಗೆ ಮುವತ್ತು ಸಾವಿರಕ್ಕೂ ಹೆಚ್ಚು ಮತವನ್ನು ಮುನ್ನಡೆ ಗಳಿಸಿ ಜಯಶಾಲಿ ಆಗಲಿದ್ದಾರೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ಮಾತನಾಡಿ ಶಾಸಕ ಡಿ ರವಿಶಂಕರ್ ಅವರು ತಮ್ಮದೇ ಸರ್ಕಾರವಿದೆ ಅದರಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದು ಬಿಟ್ಟು ಸಾರಾ ಮಹೇಶ್ ತಂದಂತಹ ಅನುದಾನವನ್ನು ಬೇರೆ ಗ್ರಾಮಗಳಿಗೆ ಸ್ಥಳಾಂತರಿಸುವುದಕ್ಕೆ ಖಂಡಿಸುತ್ತೇವೆ ಎಂದರು. ಅಲ್ಪಸಂಖ್ಯಾತರೇ ಹೆಚ್ಚು ಇರುವ ಪಟ್ಟಣದ ಬಸವೇಶ್ವರ ಬಡಾವಣೆಯ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಹಾಗೂ ಒಕ್ಕಲಿಗರು ಹೆಚ್ಚು ವಾಸಿಸುವ ಕುಳ್ಳೇಗೌಡರ ಬೀದಿಯ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಅನುದಾನ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಹತ್ತಾರು ಗ್ರಾಮಗಳ ಕಾಮಗಾರಿ ಬದಲಾಗಿದ್ದು ಇದನ್ನು ಮತ್ತೆ ಅಲ್ಲೇ ಹಾಕಬೇಕು ಎಂದು ಅಂಕಿ ಅಂಶಗಳ ಪ್ರತಿ ನೀಡಿದರು.
ಸಾರಾ ಮಹೇಶ್ ಅವರು ಸಾರ್ವಜನಿಕರ ಕಷ್ಟ ಸುಖದಲ್ಲಿ ಬಾಗಿ ಆಗುತ್ತಿದ್ದು ಶೀಘ್ರದಲ್ಲೇ ಕಾರ್ಯಕರ್ತರ ಸಭೆ ನಡೆಸಲಾಗುತ್ತದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡ ಲಾಲು ಸಾಹೇಬ್ ಇದ್ದರು.