ಪಲ್ಟಿಯಾದ ಕಾರು: ಸವಾರರು ಪ್ರಾಣಾಪಾಯದಿಂದ ಪಾರು
ಸಂಜೆವಾಣಿ ವಾರ್ತೆ
ಶ್ರೀರಂಗಪಟ್ಟಣ:ಮಾ.15:- ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಹುರುಳಿಕೊಂಡು ಹೊಲದಲ್ಲಿ ಬಿದ್ದಿರುವ ಘಟನೆ ತಾಲೂಕಿನ ಗಣಂಗೂರು ಗ್ರಾಮದ ಬಳಿಯಲ್ಲಿ ನಡೆದಿದೆ.
ಮೈಸೂರಿನಿಂದ -ಬೆಂಗಳೂರಿಗೆ ಹೋಗುತ್ತಿದ್ದ ಹುಂಡೈ ಜಂಟ್ ಸಂಖ್ಯೆ ಕೆಎ02 ಎಎಚ್ 7685 ಕಾರ್ ಹೈವೆ ಸರ್ವಿಸ್ ರೋಡ್ ನಲ್ಲಿ ತಿ ವೇಗದಿಂದ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರ ತಪ್ಪಿದೆ. ಇದರಿಂದ ಪಕ್ಕದ ಹಳ್ಳಕ್ಕೆ ಕಾರು ಪಲ್ಟಿ ಹೊಡೆದಿದ್ದು, ಕಾರ್ ನಲ್ಲಿದ್ದ ಐದು ಜನ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಸದ್ಯ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ.ಅಪಘಾತವಾದ ತಕ್ಷಣ ಸ್ಥಳೀಯರು ಗಾಯಾಳು
ಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.ಇವರೆಲ್ಲರೂ ಮಂಡ್ಯ ಮಲ್ಲಿಗೆರೆಯ ನಿವಾಸಿಗಳೆಂದು ಪೆÇಲೀಸ್ ಮೂಲಗಳಿಂದ ತಿಳಿದು ಬಂದಿದೆ.ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.