ಸಂವಿಧಾನ, ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ದಲಿತರಿಗೆ ಬಿಟ್ಟುಕೊಡಲಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 15- ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಕಳಕಳಿ, ಕಾಳಜಿ, ಗೌರವಇದ್ದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನುದಲಿತರಿಗೆ ಬಿಟ್ಟುಕೊಡಲಿ ಎಂದುಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಸವಾಲು ಹಾಕಿದರು.
ನಗರದಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದಲ್ಲಿಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಮೊನ್ನೆ ನಗರದಅಂಬೇಡ್ಕರ್‍ಕ್ರೀಡಾಂಗಣದಲ್ಲಿ ನಡೆದಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಬಹಳ ದೊಡ್ಡದಾಗಿಅಂಬೇಡ್ಕರ್ ಹಾಗೂ ಸಂವಿಧಾನ ಪರಿಪಾಲಕರು ನಾವು ಎಂದು ಬೊಬ್ಬೆ ಹೊಡೆಯುವಜೊತೆಗೆ ಸಂವಿಧಾನ ಉಳಿದರೆ ನಾವು ನೀವು ಉಳಿಯುತ್ತವೆ ಎಂದು ಹೇಳುತ್ತಾ ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರುದಲಿತರಿಗೆಅನ್ಯಾಯ ಮಾಡುತ್ತಾಲೇ ಬಂದಿದ್ದಾರೆಎಂದುಕಿಡಿಕಾರಿದರು.
ಸಂವಿಧಾನ ಪ್ರಕಾರವೇಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ತಳ ಮಟ್ಟದವರು ಶೋಷಿತಜನಾಂಗಕ್ಕೆಅಧಿಕಾರ ನೀಡುವ ಬದಲು. ತಾವೇಅದನ್ನುಅನುಭವಿಸುವ ಮೂಲಕ ದಲಿತರು ಹಾಗೂ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಬೇಡ್ಕರ್‍ಅವರ ಬಗ್ಗೆ ನಿಜವಾಗಿಯು ನಿಮಗೆ ಗೌರವಇದ್ದರೆದಲಿತರ ಮತಗಳನ್ನು ಪಡೆದುಅಧಿಕಾರ ಬಂದಿರುವ ನೀವು, ಆ ಸಮುದಾಯಗಳ ಋಣತೀರಿಸಲು ಮುಂದಾಗಬೇಕು. ಇನ್ನಾದರು ಸಿಎಂ ಪದವಿಯನ್ನುದಲಿತರಿಗೆ ನೀಡುವಚಿಂತನೆಯನ್ನು ಮಾಡಬೇಕುಎಂದರು.
ಪದೇ ಪದೇ ಬಿಜೆಪಿ ಮನುವಾದಿಗಳ ಪಕ್ಷ, ಅಧಿಕಾರದಿಂದದೂರವಿಡಿಎಂದು ಹೇಳುವ ನೈತಿಕತೆ ನಿಮ್ಮಗಿಲ್ಲ. ತಾವುಅಧಿಕಾರದಲ್ಲಿದ್ದ ದಿನದಿಂದಇಲ್ಲಿಯತನಕದಲಿತ ಸಮುದಾಯವನ್ನು ತುಳಿದುಕೊಂಡೆ ರಾಜಕಾರಣ ಮಾಡುತ್ತಾ ಬಂದಿದ್ದೀರಿ. ಜೆಡಿಎಸ್ ಸರ್ಕಾರದಅವಧಿಯಲ್ಲಿ ಹಣಕಾಸು ಸಚಿವರಾಗಿದ್ದಾಗ ನೀವು ಶೇ. 80 ರಷ್ಟುದಲಿತರುಗ್ರಾಮ ಸಹಾಯಕರುಇದ್ದಾರೆ. ಇವೆರಲ್ಲನ್ನುಖಾಯಂ ಮಾಡಲುಆಗುತ್ತದೆಯೇ, ನಮ್ಮ ಸಮುದಾಯವರುಇಲ್ಲಎಂದು ನೇರವಾಗಿ ಹೇಳಿದ್ದಿರಿ. ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಬೇಕೆಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್‍ಅವರನ್ನು ಸೋಲಿಸಿದಿರಿ, ಮಲ್ಲಿಕಾರ್ಜುನಖರ್ಗೆಅವರನ್ನುದೆಹಲಿಗೆಜಾಣ್ಮೆಯಿಂದ ಕಳುಹಿಸಿಕೊಟ್ಟುವರು ನೀವು. ಈ ಬಾರಿಯು ಸಹ ಮುಖ್ಯಮಂತ್ರಿಯಾಗುವಎಲ್ಲಾಅರ್ಹತೆಖರ್ಗೆಅವರಿಗೆಇದ್ದರು ಸಹ ಅವರನ್ನು ಆ ಸ್ಥಾನಕ್ಕೆ ಬರದಂತೆ ಮಾಡುವ ಮೂಲಕ ತಮ್ಮರಾಜಕೀಯದ್ದುಕ್ಕುದಲಿತರನ್ನೇ ತುಳಿದುವರು ನೀವು ಎಂದು ಪ್ರಕಾಶ್ ವಾಗ್ದಾಳಿ ಮಾಡಿದರು.
ಅನಂತ್‍ಕುಮಾರ್ ಹೆಗಡೆಯನ್ನು ಬಿಜೆಪಿಯಿಂದದೂರವಿಡಿ: ಪದೇ ಪದೇ ಸಂವಿಧಾನದ ಬಗ್ಗೆ ಮಾತನಾಡುವ ಮೂಲಕ ದಲಿತರ ಸಮುದಾಯವನ್ನು ಘಾಸಿಗೊಳಿಸುತ್ತಿದ್ದಾರೆ. ಇದು ಪಕ್ಷಕ್ಕೆ ಹೆಚ್ಚಿನ ಹಾನಿ ಮಾಡುತ್ತಿದೆ. ಹೀಗಾಗಿ ಅನಂತ್‍ಕುಮಾರ್ ಹೆಗಡೆಅವರಿಗೆ ಲೋಕಸಭಾಟಿಕೆಟ್ ನೀಡಬಾರದು. ಪಕ್ಷದಿಂದಅವರನ್ನುದೂರಇಡುವ ಕ್ರಮಕೈಗೊಳ್ಳಬೇಕು ಎಂದು ಮೂಡ್ನೂಕೂಡು ಪ್ರಕಾಶ್ ಒತ್ತಾಯಿಸಿದರು.
ಗೋಷ್ಠಿಯಲ್ಲಿಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಕಚೇರಿ ಕಾರ್ಯದರ್ಶಿ ರಾಜು, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಅಶ್ವಿನ್, ಮುಖಂಡರಾದ ವೇಣುಗೋಪಾಲ್, ಮುತ್ತಿಗೆ ಮೂರ್ತಿ, ಶಿವರುದ್ರಸ್ವಾಮಿ ಇದ್ದರು.