ಮತಗಟ್ಟೆಗಳ ಬದಲಾವಣೆ ಪ್ರಸ್ತಾವನೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೫;  ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮತದಾನ ಕೇಂದ್ರಗಳ ಹೆಸರು ಹಾಗೂ ವಿಳಾಸ ಬದಲಾವಣೆ ಪ್ರಸ್ತಾವನೆಗೆ ಭಾರತ ಚುನಾವಣಾ ಆಯೋಗದ ಅನುಮೋದನೆ ಪಡೆಯುವ ಕುರಿತು ಬುಧವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ನಡೆಸಲಾಯಿತು.ಚುನಾವಣಾ ಆಯೋಗದ ನಿಯಮಾನುಸಾರ ಮತಗಟ್ಟೆಗಳ ಹೆಸರು ಬದಲಾವಣೆ ಪ್ರಸ್ತಾವನೆಗಳಿದ್ದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಅಂತಹ ಮತದಾನ ಕೇಂದ್ರಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳ ಗಮನಕ್ಕೆ ತಂದು ಭಾರತ ಚುನಾವಣಾ ಆಯೋಗದ ಅನುಮೋದನೆಗೆ ಸಲ್ಲಿಸಬೇಕಿರುತ್ತದೆ.  ಅದರಂತೆ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಮತಗಟ್ಟೆಗಳ ಪಟ್ಟಿಯನ್ನು ಹಾಜರಿದ್ದ ಎಲ್ಲಾ ರಾಜಕೀಯ ಪಕ್ಷಗಳ ಗಮನಕ್ಕೆ ತರಲಾಯಿತು. ಅಸ್ತಿತ್ವದಲ್ಲಿರುವ ಮತಗಟ್ಟೆಗಳ ಹೆಸರು ಹಾಗೂ ವಿಳಾಸ ಬದಲಾವಣೆಗೆ ಪ್ರಸ್ತಾಪಿತ ಮತಗಟ್ಟೆಗಳ ಹೆಸರುಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳ ಗಮನಕ್ಕೆ ತರಲಾಯಿತು.ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 4 ಮತಗಟ್ಟೆಗಳ ಸ್ಥಳ ಹಾಗೂ ಹೆಸರು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತಗಟ್ಟೆ ಸಂಖ್ಯೆ 217ರ ಸರ್ಕಾರಿ ಪ್ರೌಢಶಾಲೆ, ಪಿ.ಮಹದೇವಪುರ-1 (ರೂಂ ನಂ-1) ಮತಗಟ್ಟೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿ.ಮಹದೇವಪುರ-1 (ರೂಂ-1)ಗೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ 224 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಓಬಳಾಪುರದಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಓಬಳಾಪುರಕ್ಕೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ-225 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,. ರೂಂ.-1, ತಿಮ್ಮಣ್ಣನಾಯಕನಕೋಟೆ (ಟಿ.ಎನ್.ಕೋಟೆ)ಯಿಂದ ಸರ್ಕಾರಿ ಪ್ರೌಢಶಾಲೆ, ರೂಂ-1, ತಿಮ್ಮಣ್ಣನಾಯಕನಕೋಟೆ (ಟಿ.ಎನ್.ಕೋಟೆ)ಗೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ 226 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಂ-2 ತಿಮ್ಮಣ್ಣನಾಯಕನಕೋಟೆ (ಟಿ.ಎನ್.ಕೋಟೆ)ಯಿಂದ ಸರ್ಕಾರಿ ಪಿಯು ಕಾಲೇಜು, ರೂಂ-2, ತಿಮ್ಮಣ್ಣನಾಯಕನಕೋಟೆ (ಟಿ.ಎನ್.ಕೋಟೆ)ಗೆ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಮತಗಟ್ಟೆಗಳ ಸ್ಥಳ ಹಾಗೂ ಹೆಸರು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತಗಟ್ಟೆ ಸಂಖ್ಯೆ 39 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,  ರೂಂ-1, ಸಿದ್ದವ್ವನಹಳ್ಳಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಂ-1, ವಡ್ಡರಸಿದ್ದವ್ವನಹಳ್ಳಿಗೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ 40 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,  ರೂಂ-2, ಸಿದ್ದವ್ವನಹಳ್ಳಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಂ-2, ವಡ್ಡರಸಿದ್ದವ್ವನಹಳ್ಳಿಗೆ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದ