ಕಾಚಾಪುರ ಧೀಮಂತ ಕಲಾ ಸಾಧಕ: ಮಗಿಮಠ ಬಣ್ಣನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.15 :ನಾಡಿನ ಹಿರಿಯ ಚಿತ್ರಕಲಾವಿದÀ ದಿವಂಗತ ಸಿ. ಬಿ. ಕಾಚಾಪುರ ಅವರ ಪುಣ್ಯ ಸ್ಮರಣೆ ಪ್ರಯುಕ್ತ ವಿಜಯಪುರದ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ಏರ್ಪಡಿಸಿದ್ದ ಜಲವರ್ಣದ ಕಲಾಕೃತಿಗಳ ಚಿತ್ರಕಲಾ ಪ್ರದರ್ಶನ ಮತ್ತು ಕಲಾ ಪ್ರಾತ್ಯಕ್ಷತೆಯನ್ನು ಆಯೋಜಿಸಲಾಗಿತ್ತು.
ಮಹಾನಗರ ಪಾಲಿಕೆ ಸದಸ್ಯÀ ರಾಜಶೇಖರ ಮಗಿಮಠ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕಾಚಾಪುರ ಅವರ ಜೀವನ ಆದರ್ಶಮಯವಾದ ಕಲಾ ಬದುಕು, ಶ್ರೇಷ್ಠ್ರ ಸಂಘಟಕರಾಗಿ ಕಲಾ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಧೀಮಂತ ಕಲಾ ಸಾಧಕರಾಗಿದ್ದರು ಎಂದರು.
ಕಲೆ ಮತ್ತು ಸಾಂಸ್ಕøತಿಕವಾಗಿ ಇಡೀ ರಾಜ್ಯದಲ್ಲಿ ವಿಜಯಪುರದ ಗಮನ ಸೆಳೆಯುವ ರೀತಿಯಲ್ಲಿ ಅವರು ಮಾಡಿದ ಕೆಲಸ ಇಂದಿಗೂ ಜೀವಂತವಾಗಿದೆ. ಕಲಾ ಶಾಲೆಯ ಮುಖಾಂತರ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರಿಗೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದೆ ರೀತಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕಲಾ ಕೆಲಸ ಈ ಗ್ಯಾಲರಿಯಲ್ಲಿ ನಡೆಯಬೇಕು. ಮಹಾನಗರ ಪಾಲಿಕೆಯಿಂದ ಮೂಲ ಸೌಲಭ್ಯದ ಅಡಿಯಲ್ಲಿ ಈ ಕಲಾ ಗ್ಯಾಲರಿಗೆ ಬೇಕಾದ ಎಲ್ಲ ರೀತಿಯ ಸಹಾಯ ಮಾಡಿಸುವುದಾಗಿ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆÀು ಉಪನಿರ್ದೇಶಕÀ ಮಲ್ಲಿಕಾರ್ಜುನ ಭಜಂತ್ರಿ ಮಾತನಡಿ, ಕಳೆದ 12 ವರ್ಷಗಳಿಂದ ದಿ. ಸಿ. ಬಿ. ಕಾಚಾಪುರ ಅವರ ಹೆಸರಿನಲ್ಲಿ ಅನೇಕ ವ್ಯೆವಿಧ್ಯಮಯವಾದ ಕಲಾ ಪ್ರರ್ದಶನ, ಕಲಾ ಶಿಬಿರಗಳಂಥ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಇದು ನಿಜಕ್ಕೂ ಅವರಿಗೆ ಸಲ್ಲುವ ಕಲಾ ಶ್ರದ್ದಾಂಜಲಿ ಎಂದು ಹೇಳಿದರು.
ಸಿ.ಬಿ. ಕಾಚಾಪುರ ಅವರ ವಿದ್ಯಾರ್ಥಿ ನಾಡಿನ ಶ್ರೇಷ್ಠಕಲಾವಿದರಾದ ಕೆ.ಕೆ ಮಕಾಳೆಯವರು ಕಲಾ ಪ್ರಾತ್ಯಕ್ಷತೆಯನ್ನು ನಡೆಸಿಕೊಡುವುದದರ ಮೂಲಕ ಕಾಚಾಪುರ ಅವರಿಗೆ ಕಲಾನಮನ ಸಲ್ಲಿಸಿದರು. ವೇದಿಕೆಯಲ್ಲಿ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿಯ ಕಾರ್ಯದರ್ಶಿ ಲಿಂಗರಾಜ ಕಾಚಾಪುರ ಉಪಸ್ಥ್ಥಿತರಿದ್ದರು.
ಹಿರಿಯ ಕಲಾವಿದ ವಿದ್ಯಾಧರ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ರಮೇಶ ಚವ್ಹಾಣ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಮಾನೆ ವಂದಿಸಿದರು
ವಿಜಯಪುರ ಹಿರಿಯ ಕಲಾವಿದರಾದ ಎಸ್.ಟಿ. ಕೆಂಭಾವಿ, ಪಿ.ಎಸ್. ಕಡೇಮನಿ, ಬಸವರಾಜ ಪಾಟೀಲ, ಡಾ. ವಿಷ್ಣು ಶಿಂಧೆ, ವಿಶ್ವನಾಥ ಬೀಳಗಿ, ಡಾ. ಶಶಿಕಲಾ ಹೂಗಾರ, ಮಲ್ಲಿಕಾರ್ಜುನ ಕನ್ನೂರ, ರಾಜೇಶ್ವರಿ ಆಲಕುಂಟೆ, ಯಾಮಿನಿ ಶಹಾ, ಸವಿತಾ ಮಾನೆ, ಶಿವಾನಂಧ ಅಥಣಿ, ಶಿವಣ್ಣ ಗೊಳಸಂಗಿ, ಎ.ಎಸ್. ಕಾಖಂಡಕಿ. ಪರಶುರಾಮ ಅಳಗುಂಡಗಿ. ನಿಂಗನಗೌಡ ಪಾಟೀಲ, ಶÀಬ್ಬೀರ ನದಾಫ, ಶ್ರೀಕಾಂತ ರಜಪೂತ, ಗಂಗಾಧರ ಮಾಯಾಚಾರಿ, ಸತೀಶ ಕಲಾಲ, ಪವನ ಅಂಗಡಿ, ರಾಜುಸಿಂಗ್ ರಜಪೂತ, ಸಿದ್ದು ಬಳೂಲಗಿಡದ ಮತ್ತಿತರರು ಇದ್ದರು.