19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ವಿ.ಡಿ. ಐಹೊಳ್ಳಿ ಆಯ್ಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.15:19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ವಿ.ಡಿ. ಐಹೊಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅವರು ಮಾತನಾಡಿ, ಜಿಲ್ಲೆಯ ಹಿರಿಯ ಸಾಹಿತಿಗಳ ಆಯ್ಕೆ ಮುಕ್ತವಾಗಿ ಚರ್ಚಿಸಿ ಆಯ್ಕೆ ಮಾಡಿ ಎಂದು ಸಭೆಗೆ ವಿನಂತಿಸಿದರು.
ಸಭೆಯ ಅಧ್ಯಕ್ಷ ಸ್ಥಾನ ಕಸಾಪ ಗೌರವಾಧ್ಯಕ್ಷ ಭಾರತಿ ಪಾಟೀಲ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯಕಾರಿ ಸದಸ್ಯರುಗಳು ಮತ್ತು ಎಲ್ಲ ತಾಲ್ಲೂಕಿನ ಅಧ್ಯಕ್ಷರು ಹಾಗೂ ಸದಸ್ಯರುಗಳು ಮುಕ್ತವಾಗಿ ಚರ್ಚಿಸಿ ಹಿರಿಯ ಸಾಹಿತಿ, ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ವಿ.ಡಿ ಐಹೊಳ್ಳಿ ಅವರನ್ನು ಅಂತಿಮಗೊಳಿಸಿದರು. ಇದಕ್ಕೆ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು.
ಸÀಭೆಯಲ್ಲಿ ಗೌರವ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ, ಗೌರವ ಕಾರ್ಯದರ್ಶಿ ಸುಭಾಸಚಂದ್ರ ಕನ್ನೂರ, ಡಾ ಮಾಧವ ಗುಡಿ, ಜಿಲ್ಲಾ ಪದಾಧಿಕಾರಿಗಳಾದ ಅಭಿμÉೀಕ ಚಕ್ರವರ್ತಿ, ಮಹ್ಮದಗೌಸ್ ಹವಾಲ್ದಾರ, ರಾಜಾಸಾಬ ಶಿವನಗುತ್ತಿ, ಸುಖದೇವಿ ಅಲಬಾಳಮಠ, ತಾಲೂಕ ಘಟಕದ ಅಧ್ಯಕ್ಷರುಗಳಾದ ಡಾ. ಆನಂದ ಕುಲಕರ್ಣಿ, ಸಿದ್ದರಾಮಯ್ಯ ಲಕ್ಕುಂಡಿಮಠ, ಜಿ.ಪಿ. ಬಿರಾದಾರ, ಶಿವಾನಂದ ಡೋಣೂರ, ಶಿವಾನಂದ ಬಡಾನೂರ, ಅಶೋಕ ಆಸಂಗಿ, ರೇವಣಸಿದ್ದಪ್ಪ ಕೊಪ್ಪದ, ಎಸ್.ಆಯ್. ಬಿರಾದಾರ, ದತ್ತಾತ್ರೇಯ ಮಳಖೇಡ, ರಾಘವೇಂದ್ರ ಕುಲಕರ್ಣಿ, ಸಿದ್ದಪ್ಪ ಮಾನೆ ಮುಂತಾದವರು ಉಪಸ್ಥಿತರಿದ್ದು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಮಕ್ಬುಲ್ ಅಂಗಡಗೇರಿ, ಶಿವಪುತ್ರ ಅಂಕದ, ರೂಪಾ ರಜಪೂತ, ಸಾವಿತ್ರಿ ಮೊನಾಜಿ, ಗಂಗಮ್ಮಾ ರಡ್ಡಿ, ಲತಾ ಗುಂಡಿ, ಬಸವರಾಜ ಮೇಟಿ, ಜಯಶ್ರೀ ಹಿರೇಮಠ, ಮಹಾದೇವಿ ತೆಲಗಿ, ಬಸವರಾಜ ಕೊನರಡ್ಡಿ. ಗೀತಾ ಕುಲಕರ್ಣಿ. ಶಿಲ್ಪಾ ಭಸ್ಮೆ, ಕಮಲಾ ಮುರಾಳ, ಯುವರಾಜ ಚೊಳಕೆ ಮುಂತಾದವರು ಉಪಸ್ಥಿತರಿದ್ದರು.