ತರಗತಿಯಲ್ಲಿ ಮೊಬೈಲ್ ಬಳಕೆ ತಡೆಗೆ ಒತ್ತಾಯ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ‌.೧೫ : ಶಿಕ್ಷಕರು ತರಗತಿಗಳಲ್ಲಿ ಮೊಬೈಲ್ ಬಳಸುತ್ತಿರುವುದು ಹಾಗೂ ಆಹಾರ ಪದಾರ್ಥಗಳಲ್ಲಿ ಅಜೀನಾ ಮಾಟೋ  ಬಳಕೆಯನ್ನು ದಾವಣಗೆರೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ, ದಾವಣಗೆರೆ ಜಿಲ್ಲಾ ಘಟಕ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಹೆಚ್ಚು ಅಜೀನಾ ಮೋಟೋ (ಟೇಸ್ಟಿಂಗ್ ಪೌಡರ್) ಬಳಕೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ಮಕ್ಕಳು ಹಾಗೂ ಜನರು ಬಳಲುವಂತಹ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಇದರಿಂದ ತಡೆಗಟ್ಟುವ ಕ್ರಮ ಕೈಗೊಳ್ಳಲು ಆಗ್ರಹಿಸಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಧೀಂದ್ರ ಕುಮಾರ್ ಟಿ.ಟಿ., ಮಹಿಳಾ ಅಧ್ಯಕ್ಷೆ, ಪುಷ್ಪಾ, ವನಿತಾ, ಆಶಾ, ಪ್ರಶಾಂತ, ಮಂಜುನಾಥ, ಅರುಣಕುಮಾರ ಮತ್ತು ಮಂಜುಳ ಮತ್ತಿತರರಿದ್ದರು.