ಹಾಸ್ಟೆಲ್ ವಾರ್ಡನ್ ಮನೆ ಕಳವು
ಕಲಬುರಗಿ,ಸೆ.17-ಹಾಸ್ಟೆಲ್ ವಾರ್ಡನ್ ಒಬ್ಬರು ಬಾಡಿಗೆಗಿರುವ ಮನೆ ಬೀಗ ಮುರಿದು ಚಿನ್ನಾಭರಣ, ನಗದು ಹಣ ಮತ್ತು ಮೊಬೈಲ್ ಸೇರಿ 85,590 ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಸ್ಬಾ ನಗರದಲ್ಲಿ ನಡೆದಿದೆ.
ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾರ್ಡನ್ ಆಗಿರುವ ಜಾವೀದ್ ಪಟೇಲ್ ಎಂಬುವವರ ಮಿಸ್ಬಾ ನಗರದಲ್ಲಿ ಬಾಡಿಗೆಗಿದ್ದ ಮನೆ ಬೀಗ ಮುರಿದು ಕಳ್ಳರು ಮನೆಯಲ್ಲಿದ್ದ 12,592 ರೂ.ಮೌಲ್ಯದ 2.590 ಗ್ರಾಂ.ಬಂಗಾರದ ಉಂಗುರ, 14,999 ರೂ.ಮೌಲ್ಯದ ಸ್ಯಾಮಸಂಗ್ ಗ್ಯಾಲಕ್ಸಿ ಮೊಬೈಲ್, 12,999 ರೂ.ಮೌಲ್ಯದ ರೂ.ಮೌಲ್ಯದ ರೆಡ್‍ಮಿ ನೋಟ್ 7 ಪ್ರೋ ಮೊಬೈಲ್, 45 ಸಾವಿರ ರೂ.ನಗದು ಹಣ ಸೇರಿ 85,590 ರೂ.ಮೌಲ್ಯದ ವಸ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ.
ಈ ಸಂಬಂಧ ಜಾವೀದ್ ಪಟೇಲ್ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.