ಟ್ರ್ಯಾಕ್ಟರ ಬೈಕ್ ಡಿಕ್ಕಿ ವಿದ್ಯಾರ್ಥಿ ಸಾವು
ಆಳಂದ:ಸೆ.17: ಪಟ್ಟಣದ ಪ್ರವಾಸಿ ಮಂದಿರದಿಂದ ಹಳೆಯ ಚೆಕ್‍ಪೋಸ್ಟ್ ಮಾರ್ಗ ಮಧ್ಯದಲ್ಲಿ ಭಾನುವಾರ ಸಂಜೆಯ ಹೊತ್ತಿನಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಾಗಿದ್ದ ವಿದ್ಯಾರ್ಥಿಗಳಿಬ್ಬ್ಬರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಿಸಿ ಚಿಕಿತ್ಸೆ ನೀಡಲಾಗಿತ್ತಾದರು, ಚಿಕಿತ್ಸೆ ಫಲಕಾರಿಯಾಗದೆ ್ಲ ಓರ್ವ ಸವಾರ ಸೋಮವಾರ ಬೆಳಗಿನ ಜಾವ ಮೃತಪಟ್ಟ ಘಟನೆ ವರದಿಯಾಗಿದೆ.
ಪಟ್ಟಣದ ನಿವಾಸಿಯಾಗಿದ್ದ ಸ್ವಯಂ ಸತೀಶ ಢಗೆ (17) ವಿದ್ಯಾರ್ಥಿಯೇ ಮೃತಪಟ್ಟಿದ್ದು, ಇನ್ನೋರ್ವ ಹಿಂಬದಿಯ ಸವಾರನಾಗಿದ್ದ ವಿದ್ಯಾರ್ಥಿ ಪಟ್ಟಣದ ನಿವಾಸಿ ವಿನಯ ಇಂದ್ರಜೀತ ರೆಡ್ಡಿ (17), ಗಾಯಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ್ದ ಹೆಚ್ಚುವರಿ ಎಸ್‍ಪಿ ಶ್ರೀನಿಧಿ ಮತ್ತು ಪೊಲೀಸ್ ಅಧಿಕಾರಿಗಳು ಗಾಯಾಳುಗಳಿಗೆ ಆಸ್ಪತ್ರೆಗೆ ಸಾಗಿಸಿದರು.
ಪಟ್ಟಣದಿಂದ ಹೊರವಲಯದ ಹಳೆಯ ಚೆಕ್‍ಪೋಸ್ಟ್‍ಗೆ ಬೈಕ್ ಮೇಲೆ ಹೊರಟ್ಟಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ಹೇಳಿಕೊಂಡಿವೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.