ಸರ್ವಜ್ಞ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ವ್ಹಾಲಿಬಾಲ್‍ದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ತಾಳಿಕೋಟೆ:ಸೆ.17: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರೌಢಶಾಲೆಯ ವಿದ್ಯಾರ್ಥಿಗಳು ಘಾಳಪೂಜಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಮುದ್ದೇಬಿಹಾಳ ತಾಲೂಕ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಸ್ಪರ್ಧೆಯಲ್ಲಿ ಸಚಿನ ಜಂಬಗಿ (ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ), ಮಹೇಶ ತಳವಾರ (ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ), ಅನಿಲ ಗುಂಡಳ್ಳಿ (200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ), ಸಚಿನ ಜಂಬಗಿ ಬಲ್ಲೇ ಎಸೆತದಲ್ಲಿ ತೃತೀಯ ಸ್ಥಾನ), ಪಡೆದುಕೊಂಡಿದ್ದಾರೆ.
ಗುಂಪು ಆಟಗಳ ಸ್ಪರ್ಧೆಯಾದ ವ್ಹಾಲಿಬಾಲ್ ಪಧ್ಯದಲ್ಲಿ ಕುಮಾರ ರೋಷನ್ ಕಾಳಗಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರೌಢಶಾಲೆಯ ವಿದ್ಯಾರ್ಥಿಗಳು, ಇಂದಿರಾ ಗಾಂಧಿ ಮುರಾರ್ಜಿ ದೇಸಾಯಿ ವಸತಿ ಶಾಲೆ ತಮ್ಮದಡ್ಡಿ ಶಾಲೆಯ ವಿದ್ಯಾರ್ಥಿಗಳನ್ನು ಫೈನಲ್ ಪಂದ್ಯದಲ್ಲಿ ಹತ್ತು ಅಂಕಗಳಿಂದ ಸೋಲಿಸಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಮುಖ್ಯ ಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಶಿಕ್ಷಕರಾದ ರಾಜು ಜವಳಗೇರಿ, ಎಂ.ಬಿ. ಹಿರೇಗೌಡರ, ಭೀಮನಗೌಡ ಸಾಸನೂರ, ಬಸವರಾಜ ತಳವಾರ, ವಿಜಯಕುಮಾರ ಹಳಿಯಾಳ, ರಸೂಲಸಾ ತುರ್ಕಣಿಗೇರಿ, ಸಿದ್ದನಗೌಡ ಚೌದರಿ, ಶರಣಗೌಡ ಕಾಚಾಪುರ, ಸಂಜುಕುಮಾರ ಭಜಂತ್ರಿ, ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ, ಪುಷ್ಪ ನಾಡಗೌಡ, ಪಲ್ಲವಿ ಕಸ್ತೂರಿ, ಲಕ್ಷ್ಮಿ ಚುಂಚುರ, ದೇವೇಂದ್ರ ಗುಳೆದ, ಅನಿತಾ ಚೌದ್ರಿ, ಅಂಬುಜಾ ಹಜೇರಿ, ರಾಣಿ, ರಾಜಬಿ ಬಿದರಿ, ಪುಷ್ಪ ನಾಡಗೌಡರ, ಕಲ್ಪನಾ ಹಜೇರಿ, ಪಲ್ಲವಿ ಕಸ್ತೂರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಶಂಕ್ರಮ್ಮ, ಮೇಘಾ ಪಾಟೀಲ, ಮುಬಿನ ಮುರಾಳ, ಅಭಿನಂದಿಸಿದ್ದಾರೆ.