ಮಡಿವಾಳಮ್ಮಗೆ ಕರ್ನಾಟಕ ಶಿಕ್ಷಣ ಸಿರಿ ಪ್ರಶಸ್ತಿ
ತಾಳಿಕೋಟೆ:ಸೆ.17: ತಾಲೂಕಿನ ಬಳಗಾನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರಿಗೆ ಕರ್ನಾಟಕ ಶಿಕ್ಷಣ ಸಿರಿ ಪ್ರಶಸ್ತಿ ಲಭಿಸಿದೆ.
ರಾಯಬಾಗ ತಾಲೂಕಿನ ಬ್ಯಾಕೋಡ ಗ್ರಾಮದ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ಇವರಿಂದ ಕೊಡಮಾಡಲಾಗುವ ಕರ್ನಾಟಕ ಶಿಕ್ಷಣ ಸಿರಿ ಪ್ರಶಸ್ತಿಯು ಮುಧೋಳದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.