ಬಿತ್ತನೆ ಬೀಜ ವಿತರಣೆಗೆ ಶಾಸಕ ಪಾಟೀಲರಿಂದ ಚಾಲನೆ
ಬೀಳಗಿ:ಅ.4:ಕೃಷಿಯಲ್ಲಿ ರೈತಾಪಿ ಜನರುದುಡಿಯುವ ಕೈಗಳ ಸಂಖ್ಯೆಕಡೆಮೆಯಾಗಿದೆ. ರೈತರುತಮ್ಮಆರ್ಥಿಕ ಮಟ್ಟ ಸುದಾರಿಸುವಂತ ಬೆಳೆಗಳನ್ನು ಬೇಳೆದರೆ ಮಾತ್ರಆರ್ಥಿಕವಾಗಿಅಭಿವೃದ್ದಿ ಹೊಂದಲು ಸಾಧ್ಯ. ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಸ್ಥಳೀಯ ಕೃಷಿ ಇಲಾಖೆಯಕಾರ್ಯಾಲಯದಲ್ಲಿ ಬುಧವಾರ ಕೃಷಿ ಇಲಾಖೆ 2024-25ನೇ ಸಾಲಿನ ಹಿಂಗಾರಿ ಗಂಗಾಮಿನ ರೈತರಿಗೆರಿಯಾಯಿತಿದರದಲ್ಲಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣಗಳ ಫಲಾನುಭವಿಗಳಿಗೆ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿಅವರು ಮಾತನಾಡಿದರು.ಕೃಷಿ ಇಲಾಖೆ ಹಾಗೂ ತೋಟಗಾರಿಕೆಇಲಾಖೆಯಲ್ಲಿದೊರೆಯುವ ಸೌಲಭ್ಯಗಳು ಫನಾನುಭವಿಗಳು ಸರಿಯಾದ ಮಾಹಿತಿ ಪಡೆದು ಲಾಭದಾಯದ ಬೆಳೆ ಪಡೆಯುತ್ತಿದ್ದಾರೆಅಥವಾಇಲ್ಲಏನ್ನವುದು ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುವ ಕೆಲಸ ಅಧಿಕಾರಿಗಳು ಮಾಡಬೇಕು.ಯಾವರೈತರಿಗೆಅವಶ್ಯಇರುತ್ತದೆ.ಅಂತ ಸಣ್ಣ ಹಿಡುವಳಿ ರೈತರಿಗೆ ಅಧಿಕಾರಿಗಳು ಸೌಲಭ್ಯಗಳು ಮುಟ್ಟಿಸುವ ಕೆಲಸ ಮಾಡಬೇಕು.ಇಲಾಖೆಯಿಂದ ನೀಡಿದ ಬೀಜಗಳ ಬಿತ್ತನೆಯ ಫಲಸಲು ಸರಿಯಾಗಿ ಬಂದಿದೆಅಥವಾಇಲ್ಲಏನ್ನವುದು ಅರೀತುಕೊಳ್ಳಬೇಕು.ಎಲ್ಲರೈತರಿಗೆರಿಯಾಯಿತಿದರದಲ್ಲಿ ಬಿತ್ತನೆ ಬೀಜ ಪೂರೈಸಲು ಸೂಚನೆ ನೀಡಲಾಗಿದೆ.ರೈತರುಇದರ ಸದುಪಯೋಗ ಪಡೆದುಕೊಂಡು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಹೆಚ್ಚು ಆದಾಯ ಪಡೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣಎಸ್ ಕಳ್ಳೆನ್ನವರ ಮಾತನಾಡಿ, ಬೀಜವನ್ನು ಪಡೆಯುವಾಗರೈತರು ಇಲಾಖೆ ನೀಡಿರುವಎಫ್.ಐ.ಡಿ.ಸಂಖ್ಯೆಅಥವಾಆಧಾರಕಾರ್ಡ್, ಬ್ಯಾಂಕ್ ಪಾಸಬುಕ್ ಹಾಗೂ ಜಮೀನಿನ ಉತಾರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.ಎಸ್.ಸಿಎಸ್.ಟಿ ರೈತರುಕಡ್ಡಾಯವಾಗಿಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕುರೈತ ಫಲಾನುಭವಿಗಳೆ ಹಾಜರಿರಬೇಕು.ಬಿತ್ತನೆ ಪೂರ್ವದಲ್ಲಿ ಕೃಷಿ ತಜ್ಷರು ಹಾಗೂ ಕೃಷಿ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು ಎಂದರು.
ಕೃಷಿ ಯಂತ್ರೋಪಕರಣಗಳ ವಿತರಣೆ:
ರೋಟವೇಟರ.ಚಾಪ್‍ಕಟ್ಟರ್, ಪವರ್‍ಟಿಲ್ಲರ್, ನೇಗಿಲು, ಸ್ಪಿಂಕ್ಲರ್, ತಾಡಪಾಲ, ಹಾಗೂ ಕೃಷಿ ವಿಶ್ವವಿದ್ಯಾಲಯ ಸುದಾರಿತ ಬೇಸಾಯ ಕ್ರಮಗವುಳ್ಳ ಮಾಹಿತಿ ಪುಸ್ತಕ ವಿತರಿಸಿದರು.
ಕೃಷಿ ಸಾಹಾಯಕ ನಿರ್ದೇಶಕ ಶ್ರೀನಿವಾಸ ಪಾಟೀಲ ರೈತ ಸಂಪರ್ಕಕೇಂದ್ರದಅಧಿಕಾರಿ ಪ್ರಕಾಶ ಬಂಡೆಪ್ಪನಹಳಿ, ಟಿಎಪಿಸಿಎಂಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಗ್ಯಾರೇಂಟಿಯೋಜನೆಅಧ್ಯಕ್ಷಅಣವೀರಯ್ಯ ಪ್ಯಾಟಿಮಠ, ಶ್ರೀಶೈಲ ಅಂಟಿನ, ಚಿದಾನಂದ ನಂದ್ಯಾಳ, ಮೇಲ್ವಿಚಾರಕ ಸಂತೋಷ ಬೆಂಕಿ, ಮಂಜುನಾಥ ಭಜಂತ್ರಿ ಹಾಗೂ ಇನ್ನೂಅನೇಕರುಇದ್ದರು.