ಕಲಬುರಗಿ ವಲಯ ಮಟ್ಟದ ಥ್ರೋಬಾಲ್ ಪಂದ್ಯ: ವಿಜಯಪುರದ ಬಿದರಿ ನರ್ಸಿಂಗ್ ಸೈನ್ಸ್ ತಂಡಕ್ಕೆ ಮೂರನೇ ಸ್ಥಾನ
ವಿಜಯಪುರ,ಅ.4:ಕಲಬುರಗಿ ವಲಯದ ಪುರುಷರ ಥ್ರೋಬಾಲ್ ಹಾಗೂ ಮಹಿಳೆಯರ ಟೆನಿಕ್ವಾಯಿಟ್ ಪಂದ್ಯಾವಳಿಯಲ್ಲಿ ವಿಜಯಪುರದ ಎಚ್.ಟಿ. ಬಿದರಿ ಮೆಮೋರಿಯಲ್ ಟ್ರಸ್ಟ್‍ನ ನ್ಯೂ ಅಶ್ವಿನಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‍ನ ಪುರುಷರ ಥ್ರೋಬಾಲ್ ತಂಡ ಮೂರನೇ ಸ್ಥಾನ ಪಡೆದುಕೊಂಡಿದೆ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇವರ ವತಿಯಿಂದ ಕಲಬುರ್ಗಿ ವಲಯದ ಪುರುಷರ ಥ್ರೋಬಾಲ್ ಹಾಗೂ ಮಹಿಳೆಯರ ಟೆನಿಕ್ವಾಯಿಟ್ ಪಂದ್ಯಾವಳಿಗಳನ್ನು ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ ಮೆಡಿಕಲ್ ಕಾಲೇಜ್, ಪಿ.ಜಿ.ರಿಸರ್ಚ ಸೆಂಟರ್ ಆ್ಯಂಡ್ ಆರ್.ಪಿ.ಕೆ.ಆಯುರ್ವೇದಿಕ್ ಹಾಸ್ಪಿಟಲ್ ಇವರು ಸೆ.30 ರಿಂದ ಅ.1ರವರೆಗೆ ಆಯೋಜಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಡಾ. ಎಲ್.ಎಚ್. ಬಿದರಿ, ಶೋಭಾ ಬಿದರಿ, ಪ್ರಾಂಶುಪಾಲೆ ಆರತಿ, ದೈಹಿಕ ಶಿಕ್ಷಕ ಎಮ್.ಎಲ್. ಬಿಜ್ಜರಗಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ತಂಡದ ಎಲ್ಲ ಆಟಗಾರರನ್ನು ಅಭಿನಂದಿಸಿದ್ದಾರೆ.