ಶ್ರೀ ದಾಮೋದರ ರಘೋಜಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಕಲಬುರಗಿ,ಅ.6-ನಗರದ ಹುಮನಾಬಾದ ರಿಂಗ್ ರಸ್ತೆಯ ಟಿ.ವಿ.ಸ್ಟೇಷನ್ ಹಿಂದುಗಡೆ ಇರುವ ಶ್ರೀ ದಾಮೋದರ ರಘೋಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2024-25ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕು.ಜ್ಯೋತಿ ರಾಜಶೇಖರ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕು.ಶ್ರೇಯಾ ನಾಗೇಶ ಕಮಲಾಪೂರ, ಕು.ಸೋನಿಕಾ ಲಕ್ಷ್ಮೀಕಾಂತ ಕರಾಟೆಯಲ್ಲಿ ಪ್ರಥಮ ಸ್ಥಾನ, ವಿಶಾಲ ಶಿವಯೋಗಿ, ಓಂಕಾರ ನಾಗಯ್ಯ ಸ್ವಾಮಿ, ಸಂತೋಷ ಸಿದ್ದರಾಮ ಹಾಗೂ ಮನೋಜ್ ಮಲ್ಲಿಕಾರ್ಜುನ ಅವರು ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಲಿಖಿತಾ ಆನಂದ 200 ಮೀಟರ್ ಓಟದಲ್ಲಿ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಡಿ.ರಘೋಜಿ, ಕಾರ್ಯದರ್ಶಿ ಮೀರಾ ಆರ್.ರಘೋಜಿ, ಟ್ರಸ್ಟಿಗಳಾದ ನಂದಿನಿ ಆರ್.ರಘೋಜಿ, ವಿಷ್ಣು ಖೆಲೋಜಿ, ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಕಿಣ್ಣಿ, ದೈಹಿಕ ಶಿಕ್ಷಕರಾದ ಸಂತೋಷಕುಮಾರ ಕಟಕೆ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.