ದಸರಾ: ದೇವಿ ಮೂರ್ತಿ ಅದ್ದೂರಿ ಮೆರವಣಿಗೆ
ವಿಜಯಪುರ.ಅ.6:ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿಯ ವತಿಯಿಂದ, ದಸರಾ ಹಬ್ಬದ ಪ್ರಯುಕ್ತ 45ನೇ ವರ್ಷದ 101 ಕೆಜಿ ಬೆಳ್ಳಿಯ ದೇವಿಯ ಮೂರ್ತಿ ಅದ್ದೂರಿ ಮೆರವಣಿಗೆಯ ಕಾರ್ಯಕ್ರಮವನ್ನು ನಾಗಠಾಣದ ಶ್ರೀ. ಮ.ಘ.ಚ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಮೆರವಣಿಗೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಶ್ರೀ ಗುರುಪಾದಯ್ಯ (ಗುರು) ಶ್ರೀಶೈಲ ಗಚ್ಚಿನಮಠ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವು 101 ಕೆ.ಜಿ. ಬೆಳ್ಳಿ ದೇವಿಯ ಭವ್ಯ ಮೆರವಣಿಗೆ ನಾಡದೇವಿ ದಸರಾ ಉತ್ಸವ ಶ್ರೀ ರಾಮ ಮಂದಿರದಿಂದ ಪ್ರಾರಂಭವಾಗಿ ಅಮೀರ ಟಾಕೀಸ್, ಶ್ರೀ ಸಿದ್ದೇಶ್ವರ ದೇವಾಲಯ ಗಣಪತಿ ಚೌಕ, ಎ???ಸ್ ರೋಡ್‍ದಿಂದ ಗಾಂಧಿ ಸರ್ಕಲ್ ಮಾರ್ಗವಾಗಿ ಸರಾಫ ಬಜಾರ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ಅದಿಶಕ್ತಿ ತರುಣ ಮಂಡಳಿಯು ನಿರ್ಮಿಸಿರುವ ಪÀಂಢರಪುರ ವಿಠ್ಠಲ ಮಂದಿರದ ಭವ್ಯ ಮಂಟಪಕ್ಕೆ ಸಂಜೆ 7 ಗಂಟೆಗೆ ತಲುಪಿತ್ತು.
ಮೆರವಣಿಗೆಯಲ್ಲಿ ವಿಶೇಷ ವಾದ್ಯ ತಂಡಗಳಾದ ಮಹಾರಾಷ್ಟ್ರದ ಕರಾಡ ಶಿವರುದ್ರಾಕ್ಷ ಡೋಲ, ಜಮಖಂಡಿ ಬ್ಯಾಂಡ್, ಕರಡಿ ಮಜಲ, ಕನ್ನಡ ಸಂಸ್ಕøತ ಇಲಾಖೆಯ ವಾದÀ್ಯಗಳು ಡೊಳ್ಳು ಕುಣಿತ, ಕುದುರೆ, ಸೊಲ್ಲಾಪುರದ ಸಿಡಿಮದ್ದು, ಈ ಎಲ್ಲ ವಾದ್ಯ ವೃಂದಗಳು ಕಾರ್ಯಕ್ರಮದಲ್ಲಿ ಮೆರುಗು ತಂದಿದ್ದವು.
ಕಾರ್ಯಕ್ರಮದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಅವೋಘಸಿದ್ಧ ನಾಯ್ಕೋಡಿ, ರಾಮನಗೌಡ ಪಾಟೀಲ(ಯತ್ನಾಳ), ರಾಜು ಮಗಿಮಠ, ಅಪ್ಪು ಡೆಂಗಿ, ಅಮೃತ ತೋಷ್ನಿವಾಲ, ಅಶೋಕ ತಿಮಶೆಟ್ಟಿ, ಮಹೇಂದ್ರ ಸುಣಗಾರ, ಭಾಗಪ್ಪ ಕನ್ನೊಳ್ಳಿ, ರಾಘು ಅಣ್ಣಿಗೇರಿ, ಚಿದಾನಂದ ಔರಂಗಬಾದ, ಪ್ರಭು ಮಲ್ಲಿಕಾರ್ಜುನಮಠ, ರಮೇಶ ಜಾನಮಟ್ಟಿ, ಮುತ್ತು ಗಂಗಾಧರ, ಆನಂದ ಮಂಗಳವೇಡೆ, ದತ್ತಾ ಹೊಸಮಠ, ಉಮಾಶಂಕರ ಮಾಳಗಿ, ಅರವಿಂದ ಹಿರೇಮಠ, ಅರವಿಂದ ಜಿರಲಿಮಠ, ವಿನೋದ ಹಿರೇಮಠ, ಸೋಮು ಅತನೂರ, ಸಿದ್ಧರಾಮೇಶ್ವರ ಹಿರೇಮಠ, ಪಿಂಟು ದರಗೋಡೆ, ಮಹಾಂತೇಶ ಹರವಾಳ, ಶಶಿ ಮುದುಕಾಮಠ, ಮಹೇಶ ನಾಗೂರ, ಸುರೇಶ ತಡಲಗಿ, ಧರೆಪ್ಪ ತುಂಗಳ, ಸಂಜಯ ಅವಜಿ, ರಾಮರಾಜು ಹಾಗೂ ಸಿದ್ಧೇಶ್ವರ ಬ್ಯಾಂಕಿನ ಎಲ್ಲ ನಿರ್ದೇಶಕರು, ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು, ಗಣ್ಯ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.