ಶಾಲಾಕಟ್ಟಡದ ಮೇಲೆ ಶೇ 60ರಷ್ಟು ಕನ್ನಡ ನಾಮಫಲಕ ಕಡ್ಡಾಯಗೊಳಿಸಿ
ಭಾಲ್ಕಿ,ಅ.6: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ಲಿಂಗರಾಜಗೌಡರ ಮಾರ್ಗದರ್ಶನದಲ್ಲಿ ಬೀದರ್ ಜಿಲ್ಲೆಯ ಜಿಲ್ಲಾಧ್ಯಕ್ಷ ಸಂತೋಷ್ ಶೇರಿಕರ್ ನೇತೃತ್ವದಲ್ಲಿ
ಭಾಲ್ಕಿ ನಗರದಲ್ಲಿ ಬಿ ಇ ಓ ಅವರನ್ನು ಭೇಟಿ ಮಾಡಿ ಖಾಸಗಿ ಶಾಲೆಯ ಕಟ್ಟಡದ ಮೇಲೆ ಕಡ್ಡಾಯವಾಗಿ ಶೇಕಡ 60ರಷ್ಟು ಕನ್ನಡದಲ್ಲಿ ನಾಮಫಲಕವನ್ನು ಹಾಕಬೇಕು ಹಾಗೂ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯು ಕಡ್ಡಾಯವಾಗಿ ಹೇಳಬೇಕು, 50 ರಿಂದ 60 ವರ್ಷ ಮೇಲ್ಪಟ್ಟ ಸರ್ಕಾರಿ ಶಾಲಾ ಕಾಲೇಜುಗಳನ್ನು ತೆರವುಗೊಳಿಸಿ ಮರು ನಿರ್ಮಾಣ ಮಾಡಬೇಕು ಎಂದು ಬಿಇಓ ಅವರ ಜೊತೆ ಚರ್ಚೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸುಭಾಷ್ ಮಾಶೆಟ್ಟಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಿರಣ್ ಬಿರಾದಾರ್ ಹಾಗೂ ತಾಲೂಕು ಅಧ್ಯಕ್ಷರಾದ ಪ್ರೇಮ್ ಕುಮಾರ್, ರಾಜ್ ಭವನ ಇನ್ನಿತರರು ಉಪಸ್ಥಿತರಿದ್ದರು