371(ಜೆ) ಕಲಂ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಶೀಘ್ರ: ಸಿದ್ದರಾಮಯ್ಯ
ಕಲಬುರಗಿ,ಅ.6: ಕಲಬುರ್ಗಿಯಲ್ಲಿ ಸ.17 ರಂದು ಸಂಪುಟ ಸಭೆ ನಡೆಸಿ ತೀರ್ಮಾನ ಕೈಗೊಂಡಂತೆ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಆದಷ್ಟು ಶೀಘ್ರ ಅಸ್ತಿತ್ವಕ್ಕೆ ತರಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿಂಧನೂರಿನಲ್ಲಿ ಆಯೋಜಿಸಿರುವ ಒಂಬತ್ತು ದಿನಗಳ ದಸರಾ ಮಹೋತ್ಸವ ಅಂಗವಾಗಿ ಸಿಂಧನೂರ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ನಾಗರಿಕ ಸನ್ಮಾನ ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂತರ ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ ಕಲ್ಯಾಣದ ಎಳು ಜಿಲ್ಲೆಗಳ ಎಳು ಹೋರಾಟ ಮುಖಂಡರಿಗೆ ಗೌರವ ಸನ್ಮಾನ ನೇರವೇರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
371ನೇ ಕಲಂ ತಿದ್ದುಪಡಿ ಮಾಡಿ ಜಾರಿಗೆ ತರಲು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿರುವ ಕಲ್ಯಾಣದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ ಹಿರಿಯ ಹೋರಾಟಗಾರರಾದ ಡಾ.ಲಕ್ಷ್ಮಣ ದಸ್ತಿ ಡಾ.ರಜಾಕ ಉಸ್ತಾದ್, ರಾಘವೇಂದ್ರ ಕುಷ್ಟಗಿ, ಅನಿಲಕುಮಾರ ಬೇಲ್ದಾರ, ಸಿರಿಗೆರೆ ಪನ್ನರಾಜ, ಬಸವರಾಜ ದಳಪತಿ, ಸಂತೋಷ ದೇಶಪಾಂಡೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತ ಸಚಿವರಾದ ಎಚ್ .ಕೆ.ಪಾಟೀಲ ಡಾ.ಶರಣ ಪ್ರಕಾಶ ಪಾಟೀಲ,ಎನ್ .ಎಸ್.ಬೋಸರಾಜು, ರಾಯಚೂರು ಕೊಪ್ಪಳ ಜಿಲ್ಲೆಗಳ ಸಂಸದರು ಶಾಸಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಮಾತನಾಡಿದರು.ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಬಾರಿಗೆ 2024 ರಿಂದ ಮೈಸೂರು ದಸರಾ ಮಹೋತ್ಸವ ಮಾದರಿಯಲ್ಲಿ ಒಂಬತ್ತು ದಿನಗಳ ವೈಭವ ಪೂರ್ವಕವಾದ ದಸರಾ ಮಹೋತ್ಸವ ಸಿಂಧನೂರು ತಾಲೂಕಾ ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸಾಮರಸ್ಯದ ಪ್ರತೀಕವಾದ ಉತ್ಸವದಲ್ಲಿ ಅಪಾರ ಜನಸ್ತೋಮ ಸೇರಿತ್ತು.