ಅಂತರ ರಾಜ್ಯ ಕಳ್ಳರ ಬಂಧನ
ಇಂಡಿ :ಅ.6:ಬೆಳ್ಳಿ ಬಂಗಾರ ಆಭರಣಗಳ ಸುಲಿಗೆ ಮತ್ತು ಕಳ್ಳತನ ಮಾಡುವ ಅಂತರ ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಇಂಡಿಯ ಪೆÇೀಲಿಸರು ಯಶಸ್ವಿಯಾಗಿದ್ದಾರೆ ಎಂದು ಎಸ್.ಪಿ. ಋಷಿಕೇಶ ಸೋನಾವನೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಪಾಂಡುತರಿ ತಾಂಡಾದ ವಿಕ್ಯಾ ಅಶೋಕ ಚವ್ಹಾಣ ಮತ್ತು ಸಂಜು ಪ್ರಲ್ಹಾದ ಪವಾರ ಎಂಬುವವರೆ ಬಂಧಿತರಾಗಿದ್ದಾರೆ.
ಇವರು ಇಬ್ಬರು ಮಹಾರಾಷ್ಟ್ರದ ಇಂಡಿಗೆ ಬಂದು ಕಳೆದ ಒಂದು ವರ್ಷದಿಂದ ಇಂಡಿಯಲ್ಲಿ ತಮ್ಮ ಐದು ಜನ ಸಹಚರರೊಂದಿಗೆ ಹೊರ್ತಿ, ಅಗಸನಾಳ, ಹಳಗುಣಕಿ,ಇಂಚಗೇರಿ, ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದ 184 ಗ್ರಾಂ ಬಂಗಾರ, 80 ಗ್ರಾಂ ಬೆಳ್ಳಿ, ಹೀಗೆ ಒಟ್ಟು 9 ಲಕ್ಷ 55 ಸಾವಿರ ಬೆಲೆ ಬಾಳುವ ಸಾಮಾನು ವಶ ಪಡಿಸಿಕೊಂಡಿದ್ದಾರೆ.
ಒಟ್ಟು ಐದು ಮನೆ ಕಳ್ಳತನ ಮತ್ತು ಒಂದು ಸುಲಿಗೆ ಪ್ರಕರಣ ಪತ್ತೆಯಾಗಿದ್ದು ಪೆÇೀಲಿಸ ಇಲಾಖೆಯ ಸಿ.ಪಿಐ ಗ್ರಾಮೀಣದ ಮಲ್ಲಿಕಾರ್ಜುನ ಡಪ್ಪಿನ ಇವರ ನೇತೃತ್ವದಲ್ಲಿ ಪಿಎಸ್ ಐ ದೀಪಾ ಗೋಡೆಕರ,ಎಸ್.ಎಸ್.ಮಾಳೆಜಾನ, ಸೋಮೇಶ ಗೆಜ್ಜಿ ಮತ್ತು ಸಿಬ್ಬಂದಿ ವಿ.ಜಿ.ಗಾರಗೆ,ವಿ.ಜಿ.ಶಿರಮಗೊಂಡ,ವಿ.ಎಂ.ಮದಬಾವಿ,ಎಂ.ಎನ್.ಹೊನ್ನಾಕಟ್ಟಿ,ಎಚದ.ಎಂ.ಮುಲ್ಲಾ, ವಿ.ಎಂ.ಪಾಟೀಲ,ಮಲ್ಲು ದ್ಯಾಮಗೋಳ,ಎಸ್.ಎಮ್.ಬಿರಾದಾರ ಇವರ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದೆ.
ಪೆÇೀಲಿಸರ ಈ ಕಾರ್ಯಕ್ಕೆ ಎಸ್.ಪಿ ಋಷಿಕೇಶ ಸೋನಾವನೆ,ಹೆಚ್ಚುವರಿ ಪೆÇೀಲಿಸ ಅಧೀಕ್ಷಕ ಶಂಕರ ಮಾರಿಹಾಳ, ಇಂಡಿು ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್, ರಾಮನಗೌಡ ಹಟ್ಟಿ ಶ್ಲಾಘಿಸಿದ್ದಾರೆ.