ಅಪಘಾತ ಪ್ರಕರಣ ಆರೋಪಿಗೆ ಜೈಲು ಶಿಕ್ಷೆ
ಯಾದಗಿರಿ : ಅ.6: ಸೈದಾಪೂರ ಪೆÇಲೀಸ್ ಠಾಣಾ ವ್ಯಾಪ್ತಿಯ ಕೆ.ಗೂಡೂರು ಗ್ರಾಮದ ಮದ್ಯದ ಹೊರಹೊಲಯದ ಹೊಲದ ಹತ್ತಿರ ಫೆಬ್ರವರಿ, 13, 2024 ರಲ್ಲಿ ಆಟೋರಿಕ್ಷಾದಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಕಮಲಮ್ಮ ಗಂಡ ನಾರಾಯಣ ಮಲಗಣಿ ಸಾ.ಮಡ್ಡಿಪೇಟ ಸಾವಿಗೆ ಕಾರಣವಾದ ಆರೋಪಿ ಮಹಾದೇವ ತಂದೆ ಬೀಗಯ್ಯ ಗುಲ್ಲೆ ಎಂಬಾತನಿಗೆ ಯಾದಗಿರಿಯ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಶ್ರೀ ರಾಹುಲ್ ಚಾಂಬಾರ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಜುಲ್ಮಾನೆ ಪಾವತಿಸಲು ತಪ್ಪಿದ್ದಲ್ಲಿ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು, 187 ಐ ಎಮ್ ವಿ ???ಕ್ಟ್ ಅಪರಾಧಕ್ಕಾಗಿ 5 ನೂರು ರೂಪಾಯಿ ದಂಡ ವಿಧಿಸಿದ್ದು, ಜುಲ್ಮಾನೆ ತಪ್ಪಿದಲ್ಲಿ 1 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಸುನಂದ ಆರ್ ಅವರು ವಾದವನ್ನು ಮಂಡಿಸಿರುತ್ತಾರೆ.