ಗಾಂಧಿಜಿ ಕನಸು ಸಾಕಾರಗೊಳ್ಳಲು ಸ್ವಚ್ಛತೆ ಅಗತ್ಯ: ವಿಶ್ವಕರ್ಮಾ
ಬೀದರ್:ಅ.6: ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ಕನಸ್ಸು ಸಾಕಾರಗೊಳ್ಳಲು ಸ್ವಚ್ಛತಾ ಆಂದೋಲನ ಅಗತ್ಯವಾಗಿದೆ ಎಂದು ಮಾಜಿ ನಗರ ಸಭೆ ಸದಸ್ಯೆ ಚಂದ್ರಕಲಾ ವಿಶ್ವಕರ್ಮಾ ಹೇಳಿದರು.
ನಗರದ ಹೊಸ ಬಸ್ ನಿಲ್ದಾಣದ ಹತ್ತಿರದಲ್ಲಿರುವ ದೇವಿ ಕಾಲೋನಿಯ ಕಾಳಿಕಾ ದೇವಿ ಮಂದಿರ ಆವರಣದಲ್ಲಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರμÁ್ಟಚಾರ ನಿಗ್ರಹ ಸಮಿತಿ ಬೀದರ್ ಜಿಲ್ಲಾ ಘಟಕ ವತಿಯಿಂದ ಮಹಾತ್ಮ ಗಾಂಧೀಜಿಯವರ ಜಯಂತಿ ಅಂಗವಾಗಿ ಹಮ್ಮಿಕೊಂಡ ಸ್ವಚ್ಛತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸ್ವಚ್ಛವಾಗಿದ್ದರೆ ಪ್ರಪಂಚ ಸ್ವಚ್ಛವಾಗಿದ್ದಂತೆ. ಹಾಗಾಗಿ ಮೊದಲು ತಮ್ಮ ಮನೆ ಶುಚಿಯಾಗಿಟ್ಟುಕೊಂಡು ತಮ್ಮ ಓಣಿ, ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಸ್ವಚ್ಛವಾಗಿಡುವ ಸಂಕಲ್ಪ ತೊಡಬೇಕೆಂದು ಕರೆ ನೀಡಿದರು.
ನ್ಯಾಯವಾದಿ ಶಿವರಾಜ ಪಾಟೀಲ ನುಖ್ಯ ಅತಿಥಿಗಳಾಗಿ ಮಾತನಾಡಿ, ಸ್ವಚ್ಛತಾ ಆಂದೋಲನ ಇದು ಒಂದು ದಿನಕ್ಕೆ ಸೀಮಿತವಾಗಿರದೇ ನಿತ್ಯದ ಜವಾಬ್ದಾರಿಯಾಗಬೇಕು. ಇದರಿಂದ ಸೋಮಾರಿತನ ನಮ್ಮ ಬಳಿಯಲ್ಲಿ ಸುಳಿಯುವುದಿಲ್ಲ. ಯುವಜನರು ನಿತ್ಯ ಸ್ವಚ್ಛತೆಯಲ್ಲಿ ತೊಡಗಿ ತಮ್ಮ ಮನಸ್ಸು ಪರಿವರ್ತನೆಗೊಳಿಸಿಕೊಳ್ಳಲು ಕಿವಿ ಮಾತು ಹೇಳಿದರು.
ಮಾಜಿ ತಾಲೂಕು ಪಂಚಾಯತ ಸದಸ್ಯ ದೀಪಕ್ ಗಾದಗೆ ಮಾತನಾಡಿ, ಮಹಾತ್ಮ ಗಾಂಧಿ ಜಯಂತಿ ಕೇವಲ ಆಚರಿಸುವುದು ಆಚರಣೆಗೆ ಸೀಮಿತವಾಗಿರಬಾರದು. ಎಳೆನೀರೆ ಆಗಲಿ, ದಿನ ನಿತ್ಯ ಉಪಯೋಗಿಸುವ ಪೇಪರ್ ಕವರ್ ಹಾಳಾದ ತರಕಾರಿ ಡೆಸ್ಪಿನ್ನಲ್ಲಿ ಹಾಕಿ ಸ್ವಚ್ಛತೆ ವಾಹನ ದಲ್ಲಿ ಸಾಗಿಸಿ ರೋಗ ಮುಕ್ತ ಸ್ವಚ್ಛ ಭಾರತಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರμÁ್ಟಚಾರ ನಿಗ್ರಹ ಸಮಿತಿಯ ಜಿಲ್ಲಾ ಅಧ್ಯಕ್ಷ ಸಂಗಮೇಶ ಭಾವಿದೊಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ, ರೈಜಿಂಗ್ ಹ್ಯಾಂಡ್ಸ್ ಯೂತ್ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸತೀಶ ಬಿಳುಕೋಟೆ, ಕಾಳಿಕಾ ದೇವಿಯ ದೇವಸ್ಥಾನದ ಅರ್ಚಕರು, ಸಂಘಟನೆಯ ಯುವ ಘಟಕದ ಜಿಲ್ಲಾ ಅಧ್ಯಕ್ಷ ವಿಶಾಲ ದೊಡ್ಡಿ, ದಿನೇಶ ಚೌಹಾಣ್, ಅನಿ¯ಕುಮಾರ, ಸಾಂಗವಿ, ಖಯುಂ, ಬೀರಗುಂಡ, ಸಿರಾಜ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.