ಆರ್ಥಿಕ ಸಬಲತೆಗೆ ಬಡವರ ಹೆಬ್ಬಾಗಿಲಾಗಬೇಕು “ಬ್ಯಾಂಕ್”
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೪;  ಬಡವರು, ಶೋಷಿತ ವರ್ಗಗಳ ಆರ್ಥಿಕಾಭಿವೃದ್ಧಿ ಚಟುವಟಿಕೆಗಳಿಗಾಗಿ ಸಾಲ-ಸೌಲಭ್ಯ ನೀಡುವ ನಿಟ್ಟಿನಲ್ಲಿ ಬ್ಯಾಂಕ್‍ಗಳು ಬಡವರ ಹೆಬ್ಬಾಗಿಲಾಗಬೇಕು. ಬ್ಯಾಂಕ್‍ಗಳು ಬಡವರ ಹೆಬ್ಬಾಗಿಲಾದಾಗ ಮಾತ್ರ ದೇಶದಲ್ಲಿ ಪರಿವರ್ತನೆಯಾಗಲು ಸಾಧ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಹಾಗೂ ಸಂಸದರಾದ ಎ.ನಾರಾಯಣಸ್ವಾಮಿ ಅವರು ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಎಂ-ಸೂರಜ್ ನ್ಯಾಷನಲ್ ಪೋರ್ಟಲ್‍ನ ಉದ್ಘಾಟನೆ ಹಾಗೂ ಗ್ರಾಹಕ ಸಂಪರ್ಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರ
ಗ್ರಾಹಕ ಸಂಪರ್ಕ ಮೇಳದಂತಹ ಕಾರ್ಯಕ್ರಮಗಳು ನಿಂತ ನೀರಾಗಬಾರದು. ತೆರಿಗೆ ಹಣವನ್ನು ಬಡವರ ಮನೆ ಬಾಗಿಲಿಗೆ ಕೊಂಡೊಯ್ಯುವ ಸಂಕಲ್ಪ ಎಲ್ಲ ಸರ್ಕಾರಗಳು, ಜನಪ್ರತಿನಿಧಿಗಳು ಮಾಡಬೇಕು ಎಂದು ಹೇಳಿದರು.