ಪ್ರಕೃತಿಯ ವಿಶೇಷ ಸೃಷ್ಟಿಯೇ ಮಹಿಳೆ
ಕಲಬುರಗಿ:ಮಾ.14:“ಪ್ರಕೃತಿಯ ವಿಶೇಷ ಸೃಷ್ಟಿಯೇ ಮಹಿಳೆ, ಅವಳು ಕುಟುಂಬ, ಸಮಾಜ ಮತ್ತು ಇಡಿ ದೇಶವನ್ನು ಕಟ್ಟುತ್ತಾಳೆ” ಎಂದು ಶರಣಬಸವೇಶ್ವರ ವಿಧ್ಯಾವರ್ಧಕ ಸಂಘದ ಚೇರಪರ್ಸನರಾದ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್ ಅಪ್ಪಾ ಹೇಳಿದರು.
ಇಂದು ಅವರು ಸಿಯುಕೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು.
“ಮಹಿಳೆ ಎಲ್ಲಾ ರಂಗದಲ್ಲಿಯು ಮುಂದುವರೆದಿದ್ದಾಳೆ. ಚಂದ್ರಯಾನ, ರಾಕೇಟ ಉಡಾವಣೆಯಂತಹ ಅತ್ಯಾಧುನಿಕ ಕ್ಷೇತ್ರದಲ್ಲಿ ಮಹಿಳೆಯರು ಗಣನೀಯ ಸಾಧನೆ ಮಾಡಿದ್ದಾರೆ. ಕರುಣೆ, ವಾತ್ಸಲ್ಯ, ಮಮತೆ, ತಾಳ್ಮೆ, ಧನಾತ್ಮಕ ಚಿಂತನೆಯ ಸಕಾರ ಮೂರ್ತಿ ಮಹಿಳೆಯಾಗಿದ್ದಾಳೆ. ಆದರೆ ಇಂತಹ ಮಾತೃಸ್ವರೂಪಿ ಮಹಿಳೆಯರ ಮೇಲೆ ಧೌರ್ಜನ್ಯಗಳು ನಡೆಯುತ್ತೀರುವುದು ಅತ್ಯಂತ ಕಳವಳಕಾರಿ. ಅದನ್ನು ಅವಳು ಮೆಟ್ಟಿ ನಿಂತಿದ್ದಾಳೇ ಇದು ಅವಳ ಮನೋಬಲವನ್ನು ತೋರಿಸುತ್ತದೆ. ಮಹಿಳೆ ಕೋಮಲವಾಗಿದ್ದರೂ ಅವಳು ಸಶಕ್ತವಾಗಿದ್ದಾಳೆ. ಆದರೆ ಇಂತಹ ಘಟನೆಗಳು ನಿಲ್ಲಬೇಕು ಮತ್ತು ಸಮಾಜ ಅವಳಿಗೆ ಅನುಕೂಲಕರ ವಾತವರಣ ನಿರ್ಮಿಸಬೇಕು. ಎಲ್ಲಿ ಸ್ತ್ರೀಯನ್ನು ಗ್ವರವಿಸುತ್ತಾರೋ ಅಲ್ಲಿ ದೇವರಿದ್ದಾನೆ. ಭೂಮಿ ಭೂಮಿತಾಯಿ, ನೀರು ಗಂಗಾಮಾತೆ, ಜ್ಞಾನ ಸರಸ್ವತಿ, ಅನ್ನ ಅನ್ನಪೂರ್ಣೇಶ್ವರಿ, ಸಂಪತ್ತು ಲಕ್ಷ್ಮಿ ಹೀಗೆ ಮಹಿಳೆ ಎಲ್ಲಾ ಸಂಪತ್ತಿನ ಸ್ವರೂಪಳಾಗಿದ್ದಾಳೆ. ಅಂತಹ ಮಾತೃಸ್ವರೂಪಿ ಮಹಿಳೆಯರ ಉನ್ನತಿಗಾಗಿ ಪೂಜ್ಯ ದೊಡ್ಡಪ್ಪ ಅಪ್ಪಾ ಅವರು 1934 ರಲ್ಲಿಯೇ ಮಹಾದೇವಿ ಮೊದಲ ಕನ್ಯಾ ಪ್ರೌಢಶಾಲೆಯನ್ನು ಪ್ರಾರಂಭಿಸಿದ್ದಾರೆ. ಅದು ಡಾ. ಶರಣಬಸವಪ್ಪಾ ಅಪ್ಪಾ ಅವರಿಂದ ಇಂದು ಹೆಮ್ಮರವಾಗಿ ಬೇಳೇದು ನಿಂತಿದೆ. ಗೊದುತಾಯಿ ಕಲಾ, ವಾಣಿಜ್ಯ, ವಿಜ್ಞಾನ, ಇಂಜಿನಿಯರಿಂಗ, ಮ್ಯಾನೇಜಮೆಂಟ್ ಕಾಲೇಜು ಹೀಗೆ ಅನೇಕ ಕೋಸ್ರ್ಗಳು ಮಹಿಳೆಯರಿಗಾಗಿಯೇ ನಡೆಸಲಾಗುತ್ತಿದೆ, ನಮ್ಮ ಸಂಸ್ಥೆಯಲ್ಲಿ ಶೇ 60 ರಷ್ಟು ನೌಕರರು ಮಹಿಳೆಯರಿದ್ದಾರೆ. ತೊಟ್ಟಿಲ ತೂಗುವ ಕೈ ದೇಶ ತೂಗುತ್ತದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ನಾವೆಲ್ಲರೂ ಮಹಿಳೆಯರ ಸವಾರ್ಂಗಿಣ ಅಭೀವೃದ್ಧಿಗೆ ಶ್ರಮಿಸುವ ಮೂಲಕ ಅವಳನ್ನು ದೇಶದ ಪ್ರಗತಿಯ ಭಾಗವಾಗಿ ಮಾಡೋಣ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ತಯನಾರಾಯಣ ಅವರು ಮಾತನಾಡಿ “ದೇಶದ ಅಭಿವೃದ್ದಿಗೆ ಮಹಿಳೆಯ ಉನ್ನತಿಕರಣ ಬಹಳ ಮುಖ್ಯ. ಭಾರತದಲ್ಲಿ ಸಿಂದೂ ನದಿ ನಾಗರಿಕತೆಯಿಂದಲೂ ಮಹಿಳೆ ಮತ್ತು ಪುರಷರಿಗೆ ಸಮಾನ ಸ್ಥಾನಮಾನ ನೀಡಲಾಗಿದೆ. ನಾವು ದೇವತೆಯನ್ನು ಪೂಜಿಸುತ್ತೇವೆ. ಭಾರತ ಕೃಷಿ ಪ್ರಧಾನ ರಾಷ್ಟ್ರ ಕೃಷಿಯಲ್ಲಿ ಮಹಿಳೆ ಮತ್ತು ಪುರಷರು ಸಮಾನವಾಗಿ ಭಾಗವಹಿಸಿ ದೇಶದ ಆರ್ಥಿಕತೆಯನ್ನು ನಿರ್ಮಿಸಿದ್ದಾರೆ. ಆದರೆ ಪಾಶ್ಚತ್ಯರಿಂದ ಪ್ರಭಾವಿತವಾದ ನಗರ ಸಮಾಜ ತಾರತಮ್ಯ ಮನೋಭಾವವನ್ನು ಅಳವಡಿಸಿಕೊಂಡಿರುವುದು ವಿμÁದನೀಯ. 2047ರ ವರೆಗೆ ನಮ್ಮ ದೇಶ ವಿಕಶಿತ ಭಾರತವಾಗಬೇಕಾದರೆ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅವರ ಭಾಗವಹಿಸುವಿಕೆಯಿಲ್ಲದೆ ಇದು ಸಾಧ್ಯವಿಲ್ಲ. ಸಿಯುಕೆಯಲ್ಲಿ ಹುಡುಗರಿಗಿಂತ ಹುಡುಗಿಯರೆ ಹೆಚ್ಚಿದ್ದಾರೆ. ಕಲಬುರಗಿಯು ಮಹಿಳೆಗೆ ಸಮಾನ ಹಕ್ಕು ನಿಡಿದ ನಾಡು. ಮರತುರಿನ ವಿಜ್ಞಾನೇಶ್ವರ ತನ್ನ ಮಿತಾಕ್ಷರ ಗ್ರಂಥದಲ್ಲಿ 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇದೆಯೆಂದು ಹೇಳಿದ್ದಾನೆ. ಅದನ್ನು ನಾವು 2005 ರಲ್ಲಿ ಅಳವಡಿಸಿಕೊಂಡಿದ್ದೇವೆ. ನಾವು ಇಲ್ಲಿವರೆಗೆ ನಮ್ಮ ದೇಶಿಯ ಕಾನೂನುಗಳ ಮಹತ್ವ ಅರಿಯದೇ ವೀದೇಶಿ ಕಾನೂನುಗಳನ್ನು ಬಳಸುತ್ತಾ ಬಂದಿದ್ದೇವೆ. ಈಗ ನಮ್ಮ ಪ್ರಧಾನಿಯವರು ಮಹಿಳೆಯರಿಗೆ ಸಂಸತ್ತಿನಲ್ಲಿ 33% ಮೀಸಲಾತಿ ನೀಡಿರುವುದರಿಂದ ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ಮಹಿಳೆಯರ ಸಬಲಿಕರಣವಾಗುತ್ತಿದೆ” ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಗೌರವ ಅತಥಿಗಳಾದ ಶರಣಬಸವೇಶ್ವರ ವಿಧ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಮಾತನಾಡಿ “ಸಂಸ್ಥೆಗಾಗಿ ದುಡಿಯುವ ಮಹಿಳೆಯರನ್ನು ಗೌರವಿಸುವುದು ಅರ್ಥಪೂರ್ಣ ಕಾರ್ಯಕ್ರಮ. ನಮ್ಮ ರಾಷ್ಟ್ರ ಮಹಿಳೆಯನ್ನು ಗೌರವಿಸುವ ದೇಶ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅನೇಕ ಮಹಿಳೆಯರು ಅಗಧ ಕಾಣಿಕೆ ನೀಡಿದ್ದಾರೆ” ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಸ್ತಾವಿಕವಾಗಿ ಮಾತನಾಡಿದ ಸಿಯುಕೆಯ ಕುಲಸಚಿವರಾದ ಪೆÇ್ರ. ಆರ್ ಆರ್ ಬಿರಾದಾರ ಅವರು “ಮಹಿಳೆ ಸದಾ ಶ್ರಮಜೀವಿ, ನನ್ನ ತಾಯಿ ನನಗೆ ಸದಾ ಸ್ಪೂರ್ತೀ. ಅವರಿಗೆ ಗೌರವ ಪೂರಕವಾಗಿ ಪ್ರತಿ ವರ್ಷ ಮಹಿಳೆಯರಿಗೆ ಸನ್ಮಾನ ಮಾಡುತ್ತೇವೆ. ಅದರಂತೆ ಈ ವರ್ಷ ಸಿಯುಕೆಯನ್ನು ಸದಾ ಸ್ವಚ್ಛಂದವಾಗಿಡುವ ಮಹಿಳೆಯರಿಗೆ ಸಿರೆ, ಕುಪ್ಪಸ ಕೊಡುವ ಮೂಲಕ ಮಹಿಳೆಯರ ಕಾರ್ಯವನ್ನು ಗುರುತಿಸುವ ಕೆಲಸಮಾಡಲಾಗುತ್ತಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಮಾರು 40 ಮಹಿಳೆಯರಿಗೆ ಸಿರೆ, ಕುಪ್ಪಸ, ಶಾಲು ಕೊಟ್ಟು ಸನ್ಮಾನಿಸಲಾಯಿತು.