ಜಾತಿ ನಿಂದನೆ;ಕೊಲೆ ಯತ್ನ: ನಾಲ್ವರಿಗೆ ಜೀವಾವಧಿ ಶಿಕ್ಷೆ
ಕಲಬುರಗಿ,ಮಾ.14: ಜಾತಿ ನಿಂದನೆ ಮಾಡಿ, ಕೊಲೆ ಮಾಡಲು ಯತ್ನಿಸಿದ ಆರೋಪ ಸಾಬೀತಾದ್ದರಿಂದ
ನಾಲ್ವರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ಶರಣಸಿರಸಗಿ ಗ್ರಾಮದ ಅವಿನಾಶ ಅಲಿಯಾಸ್ ಸುನೀಲ ಯಶ್ವಂತರಾವ ಪೆÇಲೀಸ ಪಾಟೀಲ,ಶರಣಗೌಡ ಯಶ್ವಂತರಾವ ಪೆÇಲೀಸ ಪಾಟೀಲ, ವಿಶ್ವನಾಥ ಯಶ್ವಂತರಾವ ಪೆÇಲೀಸ ಪಾಟೀಲ ಮತ್ತು ಯಶ್ವಂತರಾವ ಭೋಜರಾವ ಪೆÇಲೀಸ ಪಾಟೀಲ ಶಿಕ್ಷೆಗೊಳಗಾದವರು.
ಗ್ರಾಮೀಣ ಪೆÇಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶರಣಸಿರಸಗಿ ಗ್ರಾಮದಲ್ಲಿ ಭೀಮಬಾಯಿ ಎಂಬ ಮಹಿಳೆ ಮನೆಯ ಮುಂದೆ ಕಸಗುಡಿಸುತ್ತಿದ್ದಾಗ ಆದ ಜಗಳದಲ್ಲಿ ಭೀಮಬಾಯಿ ಮಗ ಭೀಮರಾಯನಿಗೆ ನಾಲ್ವರು ಆರೋಪಿಗಳು ಬಂದು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು.
ಆರೋಪಿತರ ವಿರುದ್ಧ ತನಿಖಾಧಿಕಾರಿ ಗ್ರಾಮೀಣ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಎಸ್.ಎಸ್.ಹುಲ್ಲೂರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆಯನ್ನು ನಡೆಸಿದ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ (ಎಸ್.ಸಿ/ಎಸ್.ಟಿ)ದ ನ್ಯಾಯಾಧೀಶ ಮೊಹಮ್ಮದ ಮುಜೀರ್ ಉಲ್ಲಾ ಅವರು ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಹಂಪಮ್ಮ ಕಲ್ಮಠ ಅವರು ವಾದ ಮಂಡಿಸಿದ್ದರು.