ಶುದ್ಧ ಕುಡಿಯುವ ನೀರು ಒದಗಿಸುತ್ತಿರುವುದು ಶ್ಲಾಘನೀಯ
ಸೈದಾಪುರ:ಮಾ.14:ವಿವಿಧ ಕೆಲಸಗಳ ನಿಮಿತ್ತ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರು, ಶಾಲಾ ಮಕ್ಕಳಿಗೆ ಬೇಸಿಗೆ ಹಿನ್ನಲೆಯಲ್ಲಿ ಉಚಿತ ಶುದ್ಧ ಮತ್ತು ತಂಪಾದ ಕುಡಿಯುವ ನೀರು ಒದಗಿಸುತ್ತಿರುವುದು ಶ್ಲಾಘನೀಯ ಎಂದು ವಿಜಯಕುಮಾರ ಅಭಿಪ್ರಾಯಪಟ್ಟರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಮಿತ್ರ ಚಾರಿಟೇಬಲ್ ಟ್ರಸ್ಟ ವತಿಯಿಂದ ಉಚಿತ ಶುದ್ಧ ಮತ್ತು ತಂಪಾದ ನೀರು ವಿತರಣೆಯ ಅರವಟ್ಟಿಗೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಿತ್ರ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯರು ನಿಸ್ವಾರ್ಥ ಸೇವಾ ಮನೋಭಾವನೆಯುಳ್ಳವರಾಗಿದ್ದಾರೆ. ಟ್ರಸ್ಟ್‍ನ ಪ್ರತಿಯೊಬ್ಬ ಸದಸ್ಯರು ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗ ಸಮಾಜದಲ್ಲಿನ ಜನ ಸಾಮಾನ್ಯರ ಸೇವೆಗೆ ನೀಡುತ್ತಿದ್ದಾರೆ. ಮನುಷ್ಯ ಊಟವಿಲ್ಲದೆ ಬದುಕಬಹುದು. ಆದರೆ ನೀರು ಇಲ್ಲದೆ ಬದುಕಲಾರ. ನೀರಿನ ದಾಹ ಅನ್ನಕ್ಕಿಂತ ಮಿಗಿಲಾದುದ್ದು ಎಂಬುದನ್ನು ಅರಿತು ಬೇಸಿಗೆಯ2 ತಿಂಗಳು ಪಟ್ಟಣಕ್ಕೆ ಬರುವ ಜನರ ನೀರಿನ ದಾಹವನ್ನು ನೀಗಿಸುತ್ತಿರುವುದು ಬಹು ದೊಡ್ಡ ಕಾರ್ಯವಾಗಿದೆ. ಅಷ್ಟೇ ಅಲ್ಲದೆ ಕೊರೊನಾ ಸಮಯದಲ್ಲಿಯೂ ಕೂಡ ಹಸಿದವರಿಗೆ ಅನ್ನ ಕಾರ್ಯಕ್ರಮದಡಿಯಲ್ಲಿ ನಿರಂತರವಾಗಿ ಅನ್ನದಾನ ಮಾಡಿದರು. ಸರ್ಕಾರಿ ಶಾಲೆಗೆ ವಾದ್ಯಗಳು ನೀಡಿದ್ದಾರೆ. ಮಿತ್ರ ಚಾರಿಟೇಬಲ್ ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಿಗಿಸಿ ಕೊಂಡಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.
ಚಂದ್ರಶೇಖರ್‍ಗೌಡ ಹೆಗ್ಗಣಗೇರಾ, ಗುರುರಾಜ ಬಾಲಚೇಡ, ರಾಜೇಶ ದೇವರಶೆಟ್ಟಿ, ವಿಜಯಕುಮಾರ ಕಂದಳ್ಳಿ, ಬಸ್ಸು ಕಲಾಲ್, ಸಾಬಯ್ಯ ಕೂಡ್ಲೂರು, ಹಣಮಂತ ಜೇಗರ್, ರವಿ ಕದಮ್ ಸೇರಿದಂತೆ ಇತರರಿದ್ದರು.