ಆಧ್ಯಾತ್ಮ ವಿಲ್ಲದ ವಿದ್ಯೆ, ರಾಮನಿಲ್ಲದ ಅಯೋಧ್ಯಾ:ಮಸೂತಿಶ್ರೀ
ತಾಳಿಕೋಟೆ:ಮಾ.14: ಮಾನವರಾದ ನಮಗೆ ಫಲಾಪೇಕ್ಷೆವೆಂಬುದು ಇರಬಾರದು ಇದರಿಂದ ಬೇಕು ಬೇಕು ಎನ್ನುವದು ದೂರ ಸರಿಯುತ್ತದೆ ಅದನ್ನು ತಡೆದುಕೊಳ್ಳುವಂತಹ ಶಕ್ತಿ ಭಗವಂತನೇ ಕೊಡಬೇಕು ಯಾವ ರೀತಿ ಮನೆಯಲ್ಲಿ ಬಿದ್ದ ಕಸವನ್ನು ಸ್ವಚ್ಚಗೊಳಿಸಲು ಅರಿವೆಗಳನ್ನು ಉಪಯೋಗಿಸಲಾಗುತ್ತದೆಯೋ ಹಾಗೆ ಪುರಾಣ ಪ್ರವಚನವು ಮನದಲ್ಲಿಯ ಮಲೀನ ಸ್ವಚ್ಚ ಮಾಡುತ್ತದೆ ಎಂದು ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಬುಧವಾರರಂದು ಜರುಗಿದ 3ನೇ ದಿನದಂದು ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಶರಣರ ನುಡಿಮುತ್ತು ಕೇಳುವದರಿಂದ ಆನಂದ ಕೊಡುತ್ತದೆ ಪುರಾಣ ಅನ್ನುವದೇ ಒಂದು ಹೊಳಿ ಇದ್ದಂತೆ ಎಂದರು. ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ತಪ್ಪಲಗುಡ್ಡಿಯಲ್ಲಿದ್ದಂತಹ ಆದರ್ಶ ದಂಪತಿಗಳಾದ ಗುರುಲಿಂಗಯ್ಯನವರು ಹಾಗೂ ರಾಚಮ್ಮನವರು ಅತೀವ ಭಕ್ತಿ ಭಾವದಿಂದ ಆಧ್ಯಾತ್ಮೀಕ ಚಿಂತನೆಯೊಂದಿಗೆ ಬಧುಕು ಸಾಗಿಸುತ್ತಾ ಸಾಗಿದ ಈ ದಂಪತಿಗಳು ಆ ಊರಿನ ಎಲ್ಲ ಜನಮೆಚ್ಚುಗೆಗೆ ಪಾತ್ರರಾಗಿದ್ದರು.
ಇಂತಹ ಆದರ್ಶ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗಲಾರದ್ದೇ ತೊಂದರೆ ಎಂಬುದು ಕಾಡುತ್ತಿತ್ತು ಭಕ್ತರ ಮನೆಗೆ ಹೋಗಿ ದಿನನಿತ್ಯ ಹಿಟ್ಟು ಸಂಗ್ರಹ ಮಾಡಿಕೊಂಡು ಬರತಕ್ಕಂತಹ ಗುರುಲಿಂಗಯ್ಯನವರು ಪತ್ನಿಗೆ ಆ ಹಿಟ್ಟನ್ನು ನೀಡಿ ತಮ್ಮ ದಿನದ ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಸಾಗಿದ್ದ ಈ ದಂಪತಿಗಳಿಗೆ ಮಕ್ಕಳಾಗಲಾರದ್ದೇ ಕೊರಗೆ ಒಂದು ಹೋದಲ್ಲಿ ಬಂದಲ್ಲಿ, ಕುಳಿತಲ್ಲಿ, ನಿಂತಲ್ಲಿ ಕಾಡುವಂತಹ ಸ್ಥಿತಿ ಮುಂದುವರೆದಿತ್ತು ಗುರುಲಿಂಗಯ್ಯನವರು ತಮ್ಮ ಓಣಿಯಲ್ಲಿ ಮಕ್ಕಳೇ ತಮ್ಮ ಮಕ್ಕಳೆಂದು ಭಾವಿಸಿದ್ದ ಇವರು ಗುರು ಅನ್ನುವಂತಹ ಶಕ್ತಿಯಿಂದ ತಮ್ಮ ಮನೆಯ ದೇವರಿಗೆ ಭಕ್ತಿಭಾವದಿಂದ ನಡೆದುಕೊಳ್ಳುವಂತಹ ಕಾರ್ಯ ಮಾಡಬೇಕೆಂಬುದು ಈ ದಂಪತಿಗಳಿಗೆ ಸಲಹೆ ನೀಡಲಾಗಿತ್ತು ಮನೆಯ ದೇವರಿಗೆ ತೆರಳಬೇಕೆಂಬ ಪತ್ನಿ ರಾಚಮ್ಮಳಿಗೆ ಗುರುಲಿಂಗಯ್ಯನವರು ಹೇಳಿದಾಗ ಆಕೆ ನಿರಾಕರಿಸುತ್ತಾಳೆ ಗುರುಗಳು ಹೇಳಿದ್ದಾರೆಂಬ ಬುದ್ದಿ ಮಾತನ್ನು ಪತಿ ಗುರುಲಿಂಗಯ್ಯನವರು ಹೇಳಿದಾಗ ಅಂದಿನ ರಾತ್ರಿಯೇ ಪತ್ನಿ ರಾಚಮ್ಮಳಿಗೆ ಕನಸ್ಸು ಬಿಳ್ಳುತ್ತದೆ ಆ ಕನಸಿನಲ್ಲಿ ಹಂಪಿ ವಿರುಪಾಕ್ಷದೇವರು ಆಗಮಿಸಿ ನೀನೇನು ತಪ್ಪು ಯೋಚನೆ ಮಾಡಬೇಡಾ ನೀನು ನನ್ನ ಮಗಳೇ ನಿನ್ನನ್ನು ಪರಿಕ್ಷೆ ಮಾಡಿದೆ ನನ್ನ ಹತ್ತಿರ ಬರಬೇಕು ಭಾನ, ಬತ್ತಿ ಎಣ್ಣೆ ತರಬೇಕು ಎಂದು ಸ್ವಪ್ನದಲ್ಲಿ ಹೇಳಿದ ವಿರುಪಾಕ್ಷ ದೇವರ ಮಾತಿಗೆ ಮರುದಿನವೇ ಪತಿ ಗುರುಲಿಂಗಯ್ಯನವರೊಂದಿಗೆ ಹಂಪಿ ವೀರುಪಾಕ್ಷ ದೇವಾಲಯಕ್ಕೆ ಬರುತ್ತಾರೆ ದೇವನ ಪೂಜೆ ಗೈಯುವ ಸಮಯದಲ್ಲಿ ದೇವರ ಮೇಲಿದ್ದ ಹೂವು ಒಂದು ಭಲಭಾಗವೇ ಜಾರಿ ಬಿಳ್ಳುತ್ತದೆ ಇದನ್ನು ಲಕ್ಷೀಸಿದ ದೇವಾಲಯದ ಅರ್ಚಕನ ವಾಣಿಯಂತೆ ತಾಯಿ ನಿನಗೆ ಗಂಡು ಮಗು ಹುಟ್ಟುತ್ತದೆ ನೀವು ತಾಯಿಯಾಗುತ್ತೀರಿ ಎಂದಾಗ ಶರಣೆ ರಾಚಮ್ಮ ಹರ್ಷ ವ್ಯಕ್ತಪಡಿಸುತ್ತಾಳಂತೆ ಅಂದು ಪ್ರಸಾದ ಸ್ವಿಕರಿಸಿದ ರಾಚಮ್ಮ ಗರ್ಭದರಿಸುತ್ತಾಳೆ ಬಂಜೆಯ ಬಧುಕು ಬಂಗಾರವಾಗುತ್ತದೆ ಎಂದು ಹೇಳಿದ ಶ್ರೀಗಳು ಬಂಜೆಯ ಬಧುಕು ಬಂಗಾರ ಹೇಗಾಯಿತು ಎನ್ನುವ ವಿಷಯ ಕುರಿತು ಭಹು ಮಾರ್ಮಿಕವಾಗಿ ವಿವರಿಸಿದ ಶ್ರೀಗಳು ಗುರುವಿನ ಆಶಿರ್ವಾದದಿಂದ ಧಶರಥ ಮಹಾರಾಜನಿಗೆ ಪುತ್ರ ಸಂತಾನವಾಗಿದ್ದರ ಕುರಿತು ಅನೇಕ ಕಿರುಕಥೆಗಳನ್ನು ಹೇಳಿ ಭಕ್ತ ಸಮೂಹಕ್ಕೆ ಬೆರಗುಗೊಳಿಸಿದರಲ್ಲದೇ ಗುರುಗಳು ನೀಡಿದ ಪ್ರಸಾದ ಮಹಾ ಪ್ರಸಾದವಾಗಿ ಮಾರ್ಪಟ್ಟಿದ್ದನ್ನು ಸಹ ತಮ್ಮ ಮಾತಿನಲ್ಲಿಯೇ ಧರ್ಶನ ನೀಡಿದಂತೆ ಭಕ್ತ ಸಮೂಹಕ್ಕೆ ತಿಳಿ ಹೇಳಿದ ಶ್ರೀಗಳು ಮುಂದೆ ಗುರುಲಿಂಗಯ್ಯನವರ ಪತ್ನಿ ಶರಣೆ ರಾಚಮ್ಮಳಗೆ ಕುಬಸ ಮಾಡುವಂತಹ ಕಾರ್ಯ ಆ ಗ್ರಾಮದಲ್ಲಿ ನಡೆಯುತ್ತದೆ ಎಂದು ಮಹಾ ಪುರಾಣ ಮುಂದುವರೆಸಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.